ಮುಮಂ ನಡವಳಿಕೆ ನಾಟ್ ಸೋ ನೈಸ್ : ಗೌಡ

ತಮ್ಮನ್ನು ಅಸಂವಿಧಾನಿಕವಾಗಿ ನಿಂದಿಸಿ ವಿವಾದ ಸೃಷ್ಟಿಸಿದ್ದ ದೇವೇಗೌಡರನ್ನು ಯಡಿಯೂರಪ್ಪನವರೇ ಸೈನ್ ಬಗ್ಗೆ ಮಾತುಕತೆಗೆ ಆಹ್ವಾನಿಸಿದ್ದರು. ಶನಿವಾರ ಸಂಜೆ 4.30ಕ್ಕೆ ನಡೆದ ಸಭೆಯಲ್ಲಿ ಸರಕಾರದ ಬಹುತೇಕ ಸಚಿವರು, ಸರಕಾರಿ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಆಹ್ವಾನಿಸಬೇಕಿದ್ದರಿಂದ ಸಭೆ ಮುಗಿಯುತ್ತಿದ್ದಂತೆ ತ್ವರಿತಗತಿಯಲ್ಲಿ ಸಭೆಯಿಂದ ಯಡಿಯೂರಪ್ಪ ತೆರಳಿದ್ದರು. ಯಾವುದೇ ಜಂಟಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿರಲಿಲ್ಲ.
ಈ ವಿಷಯವೇ ದೇವೇಗೌಡರನ್ನು ಕೆರಳಿಸಿದೆ. ಸಭೆಯ ನಂತರ ಯಡಿಯೂರಪ್ಪ ಜಂಟಿ ಪತ್ರಿಕಾಗೋಷ್ಠಿ ಆಯೋಜಿಸಬೇಕಾಗಿತ್ತು. ಅವರು ನಡೆದುಕೊಂಡ ರೀತಿ ಸರಿಯಿರಲಿಲ್ಲ. ಕಾಟಾಚಾರಕ್ಕೆ ಮಾತ್ರ ಮಾತುಕತೆಗೆ ಆಹ್ವಾನಿಸಿದ್ದರು. ಸೈನ್ ಬಗ್ಗೆ ಸ್ಪಷ್ಟ ನಿಲುವೇನೆಂಬುದನ್ನು ಕೂಡ ಅವರು ತಿಳಿಸಿಲ್ಲ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಸೈನ್ ವಿರುದ್ಧ ತಮ್ಮ ಶಾಂತಿಯುತ ಹೋರಾಟವನ್ನು ಮುಂದುವರಿಸುವುದಾಗಿ ಗೌಡರು ಮುನರುಚ್ಚರಿಸಿದ್ದಾರೆ. ಇವರಿಗೆ ಹೇಗೆ ಬುದ್ಧಿ ಕಲಿಸಬೇಕೆಂದು ನನಗೆ ತಿಳಿದಿದೆ ಎಂದು ಗುಡುಗಿದ್ದಾರೆ. ರೈತರ ಜೊತೆ ಸಭೆ ನಡೆಸಿದ ನಂತರ ಹೋರಾಟದ ಮುಂದಿನ ರೂಪುರೇಷೆ ಸಿದ್ಧಪಡಿಸುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications