ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಆರಂಭ
ಮೈಸೂರು,
ಜ.30: ದಕ್ಷಿಣ ಭಾರತದ ತ್ರಿವೇಣಿ ಸಂಗಮ ತಿರುಮಕೂಡಲು ನರಸೀಪುರದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕುಂಭಮೇಳಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಪುಣ್ಯಸ್ನಾನಗಳನ್ನು ಮಾಡಿ ಪಾವನರಾದರು. id="toptextpromo">ಸುತ್ತೂರು
ದೇಶಿಕೇಂದ್ರ ಸ್ವಾಮೀಜಿ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಹೋದಯ ಪುಣ್ಯಸ್ನಾನ ಮಾಡುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಿದರು. ಮೀನ ಲಗ್ನದಲ್ಲಿ ಬೆಳಗ್ಗೆ 9.25ರಿಂದ 11.05 ಹಾಗೂ ಮಧ್ಯಾಹ್ನ 12.25 ರಿಂದ 1.13ಕ್ಕೆ ಅಭಿಜಿನ್ಮುಹೂರ್ತ, ವಿಧಿಮುಹೂರ್ತ ಹಾಗೂ ವೇದಮುಹೂರ್ತದಲ್ಲಿ ಭಕ್ತಾದಿಗಳು ಪುಣ್ಯಸ್ನಾನ ಮಾಡಿದರು. ಈ ಶುಭಮುಹೂರ್ತದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬುದು ನಂಬಿಕೆ. id='are-slot-1' class='oiad oi-axt oiadv'> id='top-searched-articles'> ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಹೋದಯ ಪುಣ್ಯಸ್ನಾನ ಮಾಡಿದರು. ಪುಣ್ಯಸ್ನಾನದ ಬಳಿಕ ಮಾತನಾಡಿದ ಅವರು, ಉಪಮುಖ್ಯಮಂತ್ರಿಯಾಗಿದ್ದಲೂ ನಾನು ಇಲ್ಲಿಗೆ ಆಗಮಿಸಿದ್ದೆ. ಜನಕ್ಕೆ ಮತ್ತಷ್ಟು ಒಳ್ಳೆಯ ಆಡಳಿತ ನೀಡಲು ನಮಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಅಗಸ್ತ್ಯೇಶ್ವರಸ್ವಾಮಿ ದೇವಾಲಯಕ್ಕೆ ರು.1 ಕೋಟಿ ನೆರವನ್ನು ಯಡಿಯೂರಪ್ಪ ಪ್ರಕಟಿಸಿದರು. ಜಿ ಟಿ ದೇವೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಕುಂಭಮೇಳದಲ್ಲಿ ಭಾಗವಹಿಸಿದ್ದರು.











Click it and Unblock the Notifications