ಇಂಟರ್ ನೆಟ್ಟಿಗೆ ಢಿಕ್ಕಿ ಹೊಡೆದ ಆಟೋ

ತುಂಬಾ ಎಚ್ಚರಿಕೆಯಿಂದ ವಾಹನ ಚಲಿಸುತ್ತೇನೆ, ನೀವೇನೂ ಭಯಪಡುವ ಅವಶ್ಯಕತೆ ಇಲ್ಲ. ನನ್ನ ಆಟೋದಲ್ಲಿ ಕುಳಿತರೆ ತಮ್ಮನ್ನು ಚೆನ್ನೈನ ಯಾವುದೇ ಭಾಗ, ಬಡಾವಣೆ, ಪ್ರವಾಸಿ ತಾಣ, ಮಾರ್ಕೆಟ್ಟಿಗೆ ಕರೆದುಕೊಂಡು ಹೋಗ್ತೀನಿ. ನನಗೆ ಈ ನಗರದ ಹೋಟೆಲುಗಳು, ರೆಸ್ಟೋರೆಂಟುಗಳು ಚೆನ್ನಾಗಿ ಪರಿಚಯ ಇರುವುದರಿಂದ ನಿಮಗೆ ಒಳ್ಳೆಯ ಜಾಗಕ್ಕೇ ಕರೆದುಕೊಂಡು ಹೋಗಿ ಬಿಡುವ ಸಂತೋಷ ಮತ್ತು ಜವಾಬ್ದಾರಿ ನನ್ನದು.
ನಮ್ಮೂರಿಗೆ ಬಂದಾಗ ನೀವು ಶಾಪಿಂಗ್ ಮಾಡುವುದಿದ್ದರೆ ತಮಗೆ ಏನು ಬೇಕು ಎಂದು ಒಂದು ಮಾತು ತಿಳಿಸಿದರೆ ಸಾಕು. ಅದು ಎಲ್ಲಿ ಸಿಕ್ಕುತ್ತದೆ ಎಂದು ಹೇಳ್ತೀನಿ. ಬಟ್ಟೆ ತೊಗೋಬೇಕಾ, ಬೆಳ್ಳಿ ಬಂಗಾರ ಖರೀದಿಸಬೇಕಾ, ಮರೀನಾ ಬೀಚಿಗೆ ಹೋಗಬೇಕಾ, ಸೀದಾ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ. ನನ್ನ ಟುಕ್ ಟುಕ್ ತುಂಬಾ ಸೇಫು ಮತ್ತು ಟ್ಯಾಕ್ಸಿಗಿಂತ ಚೀಪು.
ಚೆನ್ನೈಗೆ ಬಂದಾಗ ನನ್ನ ವೆಬ್ ಸೈಟಿಗೆ ಲಾಗ್ ಮಾಡಿ. ಸ್ಯಾಮ್ ಸನ್ ಎಲ್ಲಿದಾನೆ ? ಅಂತ ಯಾರನ್ನಾದ್ರೂ ಕೇಳಿ, ಯಾರ್ ಕೇಳಿದ್ರೂ ಹೇಳ್ತಾರೆ. ಒಂದು ವೇಳೆ ನೀವು ಮುಂಚಿತವಾಗಿ ಒಂದು ಮಾತು ಹೇಳಿ ಬರುವುದಿದ್ದರೆ [email protected] ವಿಳಾಸಕ್ಕೆ ಒಂದು ಈಮೇಲ್ ಬಿಸಾಕಿ. ಅಥವಾ ನನ್ನ ಮೊಬೈಲ್ ಗೆ ಒಂದು ಎಸ್ ಎಂ ಎಸ್ ಕೊಟ್ರೂನೂ ಸರೀನೆ. ನನ್ನ ಟೆಲಿಫೋನ್ ನಂಬರ್ ಬರ್ಕೊತೀರಾ : +919 840 842724












Click it and Unblock the Notifications