ಅಕ್ಕಿಗೆ 17 , ಗೋಧಿಗೆ 15 ರುಪಾಯಿ: ಹಾಲಪ್ಪ
ಬೆಂಗಳೂರು
ಜ 27 : ಸಹಕಾರ ಸಂಘಗಳ ಮೂಲಕ ಪ್ರತಿ ಕೆಜಿ ಅಕ್ಕಿಗೆ 17 ರೂಪಾಯಿ ಮತ್ತು ಗೋಧಿಗೆ 15 ರೂಪಾಯಿಗಳಂತೆ ರಾಜ್ಯಾದ್ಯಂತ ಮಾರಾಟ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹರತಾಳು ಹಾಲಪ್ಪ ತಿಳಿಸಿದ್ದಾರೆ. id="toptextpromo">ಆಹಾರ
ಧಾನ್ಯಗಳ ಬೆಲೆ ಇಳಿಸುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಜನತಾ ಬಜಾರ್ ಗಳ ಮೂಲಕ ಅಕ್ಕಿ ಮತ್ತು ಗೋಧಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ 40ಸಾವಿರ ಮೆಟ್ರಿಕ್ ಟನ್ ಅಕ್ಕಿ ಮತ್ತು 61 .23 ಮೆಟ್ರಿಕ್ ಟನ್ ಗೋಧಿ ದಾಸ್ತಾನು ಇದೆ. ಕೇಂದ್ರದಿಂದ ರಾಜ್ಯಕ್ಕೆ 16.14 ರೂಪಾಯಿಗೆ ಅಕ್ಕಿ ಮತ್ತು 14 .70 ರೂಪಾಯಿಗೆ ಗೋಧಿ ದೊರೆಯುತ್ತಿದೆ ಎಂದು ಸಚಿವರು ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಅಕ್ಕಿ
ಮತ್ತು ಗೋಧಿಗೆ ಕೇಂದ್ರ ಸರಕಾರ ಯಾವುದೇ ಸಹಾಯಧನ ನೀಡುತ್ತಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಈ ರೀತಿಯ ಅಕ್ಕಿ ಮತ್ತು ಗೋಧಿ ಮಾರಾಟ ಮಾಡುವುದಿಲ್ಲ. ಯಾವುದೇ ರೀತಿಯ ಗುರುತಿನ ಚಿಟಿ ಹೊಂದಿದವರಿಗೆ ಒಂದು ಬಾರಿಗೆ25 ಕೆಜಿ ಮತ್ತು ಗೋಧಿ ನೀಡಲಾಗುವುದು. ಈಗ ಮಾರಾಟ ಮಾಡುತ್ತಿರುವ ಅಕ್ಕಿ ಮಧ್ಯಮ ಗುಣಮಟ್ಟ ಹೊಂದಿರುತ್ತದೆ ಎಂದು ಹಾಲಪ್ಪ ಹೇಳಿಕೆ ನೀಡಿದರು.











Click it and Unblock the Notifications