ಮಠಮಾನ್ಯಗಳನ್ನು ಬೈಯೋದೇ ಗೌಡ್ರ ಕೆಲಸ

ಜೆಡಿಎಸ್ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್ ತಿಪ್ಪಣ್ಣ ಮಾಧ್ಯಮಗೋಷ್ಠಿ ನಡೆಸಿ ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇವೇಗೌಡರಿಗೆ ಲಿಂಗಾಯಿತರನ್ನು ಬೈಯುವುದು, ವೀರಶೈವ ಮಠ ಮಾನ್ಯಗಳನ್ನು ಅವಮಾನ ಮಾಡುವುದೇ ದೊಡ್ಡ ಕೆಲಸವಾಗಿದೆ. ಮಾತೆತ್ತಿದೆರ ಸಾಕು ಲಿಂಗಾಯಿತ ಟೀಕಿಸುವುದೇ ಅವರ ಇತ್ತೀಚಿನ ರಾಜಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡನ ಬಾಯಾ ಬೊಂಬಾಯಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾತನಾಡಿದ ಪರಿ ಅಸಹ್ಯ ಹುಟ್ಟಿಸುವಂತಿತ್ತು. ನಾನು ವೀರಶೈವ ಕಾರ್ಯಕ್ರಮಗಳಿಗೆ ಹೋದರೆ ಸಮಾರಂಭಕ್ಕೆ ಆಗಮಿಸಿದ್ದ ಮಠಾಧೀಶರು ಸೇರಿ ಎಲ್ಲ ನಾಯಕರು ಕೇಳುತ್ತಿದ್ದುದು ಒಂದೇ. ಜೆಡಿಎಸ್ ನಲ್ಲಿ ಇನ್ನೂ ಎಷ್ಟೂ ದಿನ ಅಂತ ಏಗುತ್ತೀರಾ ? ಸ್ವಾಭಿಮಾನಕ್ಕೆ ಕುಂದುಂಟಾದರೂ ನೀವು ಇನ್ನು ಅಲ್ಲೇ ಇದ್ದೀರಲ್ಲ ಎಂದು ಪ್ರಶ್ನಿಸುತ್ತಿದ್ದರು. ಇಂದು ಸುಧಾರಿಸಬಹುದು, ನಾಳೆ ಸುಧಾರಿಸಬಹುದು ಎಂದು ಕಾಯ್ದೆ ಪ್ರಯೋಜನವಾಗಲಿಲ್ಲ. ಪಕ್ಷ ಹಾಗೂ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದೆ ಎಂದು ತಿಪ್ಪಣ್ಣ ವಿವರಿಸಿದರು.
ನೈಸ್ ವಿರುದ್ಧ ಮಾಡುತ್ತಿರುವ ಹೋರಾಟವೆಲ್ಲ ಸ್ವಾರ್ಥಕ್ಕಾಗಿ, ಅದರಲ್ಲಿ ಯಾವ ರೈತ ಪರ ಕಾಳಜಿಯೀ ಇಲ್ಲ ಎಂದರು. ಜೆಡಿಎಸ್ ನಲ್ಲಿರುವ ಯಾರಿಗೂ ಉಳಿಗಾಲವಿಲ್ಲ. ಜೆಡಿಎಸ್ ನಲ್ಲಿರುವ ಯಾರ ಆಟವೂ ನಡೆಯಲ್ಲ. ಆಟಕ್ಕೆ ಮಾತ್ರ ನಾವುಂಟು, ಲೆಕ್ಕ ಮಾತ್ರ ದೇವೇಗೌಡರದ್ದೇ. ಯಕರು ಪಕ್ಷ ಬಿಟ್ಟು ಏಕೆ ಹೋಗುತ್ತಿದ್ದಾರೆ ಎಂದು ಗೌಡರು ಅತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಪ್ಪಣ್ಣ ಹೇಳಿದರು.












Click it and Unblock the Notifications