ಹೊಸೂರು ರಸ್ತೆ ಫ್ಲೈಓವರ್ ಜ.22ರಿಂದ ಮುಕ್ತ
ಬೆಂಗಳೂರು,
ಜ. 20 : ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸೂರುರಸ್ತೆ ಬೊಮ್ಮನಹಳ್ಳಿ-ಇಲೆಕ್ಟ್ರಾನಿಕ್ ಸಿಟಿ ಎಕ್ಸ್ ಪ್ರೆಸ್ ಹೆದ್ದಾರಿ ರಸ್ತೆ ಶುಕ್ರವಾರ (ಜ.22)ರಂದು ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. id="toptextpromo">ಬೊಮ್ಮನಹಳ್ಳಿಯಿಂದ
ಇಲೆಕ್ಟ್ರಾನಿಕ್ ಸಿಟಿ ವರೆಗಿನ 10 ಕಿಮೀ ಉದ್ದದ ನಾಲ್ಕು ಪಥದ ಈ ರಸ್ತೆ 15 ಮೀಟರ್ ಅಗಲವಾಗಿದ್ದು, 2006ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಈ ಎಕ್ಸ್ ಪ್ರೆಸ್ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಿಗದಿತ ಸಮಯಕ್ಕಿಂತ ಒಂದೂವರೆ ವರ್ಷ ತಡವಾಗಿ ಸಿದ್ದವಾಗುತ್ತಿರುವ ಈ ರಸ್ತೆಯನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ಕಮಲ್ ನಾಥ್ ಉದ್ಘಾಟಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರು
ಮಹಾನಗರಪಾಲಿಕೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಹೊರವಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications