ಗೋಹತ್ಯೆ ನಿಷೇಧಕ್ಕೆ ಕಾನೂನು ರಚಿಸಿ, ಭಾರದ್ವಾಜ್

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಒಸ್ವಾಲ್ ಪರಿಷತ್ ಏರ್ಪಡಿಸಿದ್ದ ವಿಶ್ವ ಸದ್ಭಾವನ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಗೋಹತ್ಯೆ ಕುರಿತು ಅನಗತ್ಯ ರಾಜಕೀಯ ಮಾಡುವುದರ ಬದಲು ಗೋಹತ್ಯೆ ನಿಷೇಧ ಕಾನೂನು ರಚನೆಗೆ ಸಾಧು ಸಂತರು ಸಾಂಘಿಕ ಪ್ರಯತ್ನ ನಡೆಸಬೇಕು. ನಿರಂತರ ಒತ್ತಡ ಹೇರಬೇಕು ಎಂದು ಅವರ ಸಲಹೆ ನೀಡಿದರು.
ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಕಾಲದಿಂದಲೂ ಕೇವಲ ಚರ್ಚೆ ನಡೆದಿದೆ ಹೊರತು ಕಾನೂನು ರಚನೆಗೆ ಯಾವುದೇ ಸರಕಾರ ಮುಂದಾಗಿಲ್ಲ ಮತ್ತು ಆಸಕ್ತಿಯನ್ನೂ ತೋರಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಪ್ರಾಣಿ ದಯೆಗೆ ಹೆಚ್ಚು ಆದ್ಯತೆ ನೀಡಬೇಕು. ಪ್ರಾಣೆ ಬಲಿಯನ್ನು ತಡೆಗಟ್ಟಬೇಕು. ಪ್ರಾಣಿ ಬಲಿ ಹಿತರಹಿತ ವೈದಿಕ ಆಚರಣೆಗೆ ನಾವೆಲ್ಲ ಮುಂದಾಗಬೇಕು ಎಂದು ಅವರು ತಿಳಿಸಿದರು.












Click it and Unblock the Notifications