ಕೇಶವಕೃಪಕ್ಕೂ ನೈಸ್ ವಾಸನೆ, ಎಚ್ಡಿಕೆ
ಬೆಂಗಳೂರು,
ಜ. 18 : ನೈಸ್ ಪ್ರಕರಣದ ವಾಸನೆ ಕೇಶವ ಕೃಪಕ್ಕೂ ಬಡಿದಿದೆ. ನೈಸ್ ಸಂಸ್ಥೆ ಮಾಲೀಕ ಖೇಣಿ ಕೇಶವ ಕೃಪಾದ ನೆರವು ಪಡೆದು ಎಲ್ಲೆಲ್ಲಿ ಯಾರನ್ನು ನೈಸ್ ಮಾಡಿದ್ದಾನೆ ಎನ್ನುವುದು ಗೊತ್ತಿದೆ. ಅಭಿವೃದ್ದಿ ವಿಷಯದಲ್ಲಿ ನಾನು ಮಾಡಿದ ಆರೋಪದ ಬಗ್ಗೆ ಈಗಲೂ ಬದ್ದನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. id="toptextpromo">ನಾನು
ಮಾಡಿರುವ ಆರೋಪ ಎದುರಿಸಲು ನಾನು ಹೇಗೆ ಬದ್ದನಾಗಿದ್ದೇನೋ ಅದೇ ರೀತಿ ಸಿಎಂ ಕೂಡ ಅದನ್ನು ಎದುರಿಸಲು ಬದ್ದರಾಗಿರಬೇಕು. ನೈಸ್ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಬಯಸಿದರೆ ಧರ್ಮಸ್ಥಳ ಸೇರಿದಂತೆ ಯಾವ ದೇವಸ್ಥಾನದಲ್ಲಾದರೂ ಬಂದು ಬಂದು ನಾನು ಆಣೆ ಮಾಡಲು ಸಿದ್ದ. ನೈಸ್ ಮಾರ್ಗದಲ್ಲಿ ನಮ್ಮ ಕುಟುಂಬದ ಯಾವುದೇ ಆಸ್ತಿಯಿಲ್ಲ. ವಿನಾಕಾರಣ ಆರೋಪ ಮಾಡುವ ಬಿಜೆಪಿಯವರು ತಾಕತ್ತಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲೆಸೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾತ್ರೋರಾತ್ರಿ
3500 ಕೋಟಿ ಅಭಿವೃದ್ದಿ ಪ್ಯಾಕೇಜ್ ಗೆ ಟೆಂಡರ್ ಕರೆದಿದ್ದನ್ನು ಪ್ರಶ್ನಿಸಿದ್ದೇವೆ. ಬಿಬಿಎಂಪಿ ಚುನಾವಣೆಯ ಸಂದರ್ಭದಲ್ಲಿ ತರಾತುರಿ ಟೆಂಡರ್ ಕರೆದಿದ್ದೇಕೆ? ದಿಢೀರ್ ರದ್ದು ಮಾಡಿದ್ದೇಕೆ? ಎಂದು ಸಿಎಂ ಜನತೆಗೆ ಸ್ಪಷ್ಟಪಡಿಸಲಿ. ನೆರೆ ಹಾವಳಿ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಎಷ್ಟು ಹೋಟೆಲ್ ಗಳು ತಲೆ ಎತ್ತುತ್ತಿವೆ. ಅದು ಯಾರಿಗೆ ಸೇರಿದ್ದು ಎನ್ನುವುದು ಗೊತ್ತು. ಇಂಥ ಸ್ವಯಂ ಅಭಿವೃದ್ದಿ ಬದಲು ನೆರೆ ಸಂತ್ರಸ್ತರಿಗಾದರು ನೆರವಿಗೆ ಧಾವಿಸಿದ್ದಾರೆ ಜನ ಮೆಚ್ಚುತ್ತಿದ್ದರು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.











Click it and Unblock the Notifications