ಮುತ್ಸದ್ಧಿ ರಾಜಕಾರಣಿ ಜ್ಯೋತಿ ಬಸು ಇನ್ನಿಲ್ಲ
ಕೋಲ್ಕತ್ತಾ,
ಜ. 17 : ಕಳೆದ ಕೆಲ ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಭಾರತದ ಹಿರಿಯ ರಾಜಕಾರಣಿ ಪಶ್ಚಿಮ ಬಂಗಾಲ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು(95) ನಿಧನರಾಗಿದ್ದಾರೆ. ಬಸು ನಿಧನಕ್ಕೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಗೃಹ ಸಚಿವ ಪಿ ಚಿದಂಬರಂ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. id="toptextpromo"> ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ನಗರದ ಎಎಂಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದೆರಡು ದಿನಗಳಿಂದ ಅವರ ಸ್ಥಿತಿ ತೀವ್ರ ಚಿಂತಾಜನಕವಾಗಿತ್ತು. ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಶನಿವಾರ ಜ್ಯೋತಿ ಬಸು ಅವರ ದೇಹದ ಪ್ರಮುಖಗಳು ವಿಫಲವಾಗಿವೆ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದರು. id='are-slot-1' class='oiad oi-axt oiadv'> id='top-searched-articles'> ಜ್ಯೋತಿ ಬಸು ರಾಷ್ಟ್ರ ಕಂಡ ಮುತ್ಸದ್ಧಿ ರಾಜಕಾರಣಿ. 24 ವರ್ಷಗಳ ಕಾಲ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರಿಗೆ 1996ರಲ್ಲಿ ದೇಶ ಮುನ್ನಡೆಸುವ ಅವಕಾಶ ಬಂದೊದಗಿತ್ತು. ಆದರೆ, ಪ್ರಧಾನಮಂತ್ರಿ ಹುದ್ದೆಯನ್ನು ನಯವಾಗಿ ತಿರಸ್ಕರಿಸಿದ ಅವರು ತಮ್ಮ ಸೇವೆಯನ್ನು ಪಶ್ಚಿಮ ಬಂಗಾಲಕ್ಕೆ ಸಿಮೀತಗೊಳಿಸಿಕೊಂಡರು. ಜ್ಯೋತಿ ಬಸು ಪಿಎಂ ಹುದ್ದೆ ನಿರಾಕರಿಸಿದ ನಂತರ ಆ ಸ್ಥಾನಕ್ಕೆ ಮಣ್ಣಿನ ಮಗ ಎಚ್ ಡಿ ದೇವೇಗೌಡರು ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರು.











Click it and Unblock the Notifications