ಅಕ್ರಮ ಸಕ್ರಮ : ಸುಗ್ರಿವಾಜ್ಞೆಗೆ ರಾಜ್ಯಪಾಲರ ನಕಾರ
ಬೆಂಗಳೂರು,
ಜ. 15 : ನಗರದಲ್ಲಿರುವ ಅಕ್ರಮ ಬಡಾವಣೆ, ನಿವೇಶನ ಹಾಗೂ ಕಟ್ಟಡಗಳು ಸೇರಿ ಎಲ್ಲ ಬಗೆಯ ಕಾನೂನು ಉಲ್ಲಂಘನೆಯನ್ನು ಸಕ್ರಮಗೊಳಿಸುವ ಉದ್ದೇಶದಿಂದ ಅಕ್ರಮ ಸಕ್ರಮ ಯೋಜನೆ ಜಾರಿಗೆ ಸುಗ್ರಿವಾಜ್ಞೆ ಹೊರಡಿಸಲು ರಾಜ್ಯಪಾಲ ಎಚ್ ಆರ್ ಬಾರದ್ವಾಜ್ ಸರಕಾರದ ಪ್ರಸ್ತಾವವನ್ನು ನಿರಾಕರಿಸಿದ್ದಾರೆ. id="toptextpromo">ಅಕ್ರಮ
ಸಕ್ರಮ ಯೋಜನೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸುವ ಸಂಬಂಧ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲು ಇದೇ 12 ರಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಿತ್ತು. ಇದರ ಅನ್ವಯ ಸಾರಿಗೆ ಸಚಿವ ಆರ್ ಅಶೋಕ್ ನೇತೃತ್ವದ ತಂಡ ಬುಧವಾರ ರಾಜ್ಯಪಾಲರನ್ನು ಬೇಟಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡುವಂತೆ ಕೋರಿತ್ತು. id='are-slot-1' class='oiad oi-axt oiadv'> id='top-searched-articles'>ಸರಕಾರದ
ಪ್ರಸ್ತಾವವನ್ನು ಪರಿಶೀಲಿಸಿದ ರಾಜ್ಯಪಾಲರು, ಅಕ್ರಮ ಸಕ್ರಮ ಯೋಜನೆ ವಿವಾದಗಳಿಂದ ಮುಕ್ತವಾಗಿಲ್ಲ. ಹೀಗಾಗಿ ವಿಧಾನಮಂಡಲದ ಉಭಯ ಸದನಗಳಲ್ಲಿ ಸಮಗ್ರವಾಗಿ ಚರ್ಚೆಯಾದ ನಂತರವೇ ಜಾರಿಯಾಗುವುದು ಸೂಕ್ತ ಎಂದು ಹೇಳುವ ಮೂಲಗ ಗುರುವಾರ ಹಿಂದಕ್ಕೆ ಕಳುಹಿಸಿದ್ದಾರೆ.











Click it and Unblock the Notifications