ತ್ರಿ ಈಡಿಯಟ್ಸ್ ವೀಕ್ಷಿಸಿದ ಸಿಎಂ ಯಡಿಯೂರಪ್ಪ

ಮಾಜಿ ಪ್ರಧಾನಮಂತ್ರಿ ದೇವೇಗೌಡ ಬ್ಲಡಿ ಬಾಸ್ಟರ್ಡ್ ಎಂದು ಬಾಯಿಗೆ ಬಂದ ಹಾಗೆ ವಾಗ್ದಾಳಿ ನಡೆಸಿದ ವರ್ತನೆಗೆ ಸಿಎಂ ಕೆಲ ಕಾಲ ವಿಚಲಿತರಾದಂತೆ ಕಂಡುಬಂದರು. ನಂತರ ಗೌಡರ ಹೇಳಿಕೆಗೆ ತಣ್ಣಗೆ ಪ್ರತಿಕ್ರಿಯಿಸಿ ಕೋರಮಂಗಲದ ಪಿವಿಆರ್ ಸಿನಿಮಾಸ್ ಚಿತ್ರಮಂದಿರದಲ್ಲಿ ಬಾಲಿವುಡ್ ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಮೃತ ಮಹೋತ್ಸವದ ಸಮಾರೋಪದಲ್ಲಿ ಪಾಲ್ಗೊಂಡ ಯಡಿಯೂರಪ್ಪ ನಂತರ ಪಿವಿಆರ್ ಚಿತ್ರಮಂದಿರಕ್ಕೆ ತೆರಳಿದರು. ಸಿಎಂ ಜೊತೆ ಸಚಿವರಾದ ಆರ್ ಅಶೋಕ್, ಶಾಸಕ ಸತೀಶ್ ರೆಡ್ಡಿ ಇದ್ದರು. ಸಿನಿಮಾ ಮಂದಿರ ಬಳಿ ಮಾಧ್ಯಮದವರೊಂದಿಗೆ ಮಾತನಾಡಲು ಸಿಎಂ ನಿರಾಕರಿಸಿದರು.












Click it and Unblock the Notifications