ದೇಶದ 10 ವಿಜ್ಞಾನಿಗಳಿಗೆ ಉಗ್ರರಿಂದ ಭಯ
ನವದೆಹಲಿ,
ಜ. 11 : ಪಾಕಿಸ್ತಾನಿ ಮೂಲದ ಲಷ್ಕರ್ ಇ ತೊಯ್ಬಾದಿಂದ ದೇಶದ ಪ್ರಮುಖ 10 ವಿಜ್ಞಾನಿಗಳಿಗೆ ಬೆದರಿಕೆ ವ್ಯಕ್ತವಾಗಿದ್ದು, ಅವರೆಲ್ಲರ ಭದ್ರತಾ ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಲಾಗಿದೆ. id="toptextpromo">ಪರಮಾಣು,
ರಕ್ಷಣೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿನ ವಿಜ್ಞಾನಿಗಳಿಗೆ ಉಗ್ರರಿಂದ ಬೆದರಿಕೆ ವ್ಯಕ್ತಗೊಂಡಿದೆ. ಮಸ್ಕತ್ ನಿಂದ ಗಡೀಪಾರುಗೊಂಡಿರುವ ಸರ್ಫರಾಜ್ ನವಾಜ್ ಹತ್ಯೆ ಬೆದರಿಕೆ ಎದುರಿಸುತ್ತಿರುವ ವಿಜ್ಞಾನಿಗಳ ಹೆಸರು ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಾಗಿ ಕ್ರಮವಾಗಿ ವಿಜ್ಞಾನಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇತ್ತೀಚೆಗೆ ಭಾರತ ಬಾಂಗ್ಲಾದೇಶದಲ್ಲಿ ಸೆರೆಸಿಕ್ಕ ಟಿ ನಜೀರ್ ಕೂಡ ಇದನ್ನು ಸ್ಪಷ್ಟಪಡಿಸಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರು
ಸ್ಫೋಟದಲ್ಲಿ ಈ ಇಬ್ಬರು ಉಗ್ರರೂ ಭಾಗಿಗಳಾಗಿದ್ದರು. 2008ರ ಬೆಂಗಳೂರು ಸ್ಫೋಟದಲ್ಲಿ ನೇರವಾಗಿ ಪಾಲ್ಗೊಂಡಿದ್ದ ನಜೀರ್ ಇತರ ಸ್ಫೋಟಗಳಿಗೆ ಸುಧಾರಿತ ಸಾಧನಗಳನ್ನು ಇಂಡಿಯನ್ ಮುಜಾಹೀದಿನ್ ಪೂರೈಸಿದ ಅಪಾದನೆ ಎದುರಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಮುಂಬೈ ಕೇಂದ್ರ ಹಾಗೂ ಬಾಬಾ ಬಾಲಿವುಡ್ ಸ್ಟುಡಿಯೋಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕರಾವಳಿಯಲ್ಲೂ ಭದ್ರತೆ ಬಲಪಡಿಸಲಾಗಿದೆ.











Click it and Unblock the Notifications