ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಕ್ಕುಗಳ ಪಾಲನೆ, ರಕ್ಷಣೆ ಕುರಿತ ವಿಚಾರ ಸಂಕಿರಣ

|
Google Oneindia Kannada News

Seminar on rearing of cats and protection
ಬೆಂಗಳೂರು, ಜ. 08 : ಸಾಕು ಪ್ರಾಣಿಗಳಲ್ಲೇ ಅತಿ ಮುದ್ದು ಮಾಡಿಸಿಕೊಳ್ಳುವ ಪ್ರಾಣಿ ಯಾವುದು? ನಿಯತ್ತಿನ ನಾಯಿ ಅಂತ ನೀವೇನಾದ್ರೂ ಅಂದುಕೊಂಡ್ರೆ ಅದು ತಪ್ಪು. ಅದು ಬೆಕ್ಕು. ಹೌದು ನೀವು ನಂಬಲೇಬೇಕು.

ಆದರೆ ಬೆಕ್ಕುಗಳ ಜೀವನಕ್ರಮದ ಬಗ್ಗೆ, ಅವುಗಳ ಲಾಲನೆ ಪಾಲನೆಯ ಬಗ್ಗೆ ಅನೇಕರಿಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ತಪ್ಪು ಕಲ್ಪನೆಗಳನ್ನು ದೂರಮಾಡಿಕೊಳ್ಳಬೇಕಿದ್ದರೆ, ಬೆಕ್ಕುಗಳನ್ನು ಬೆಳೆಸುವ, ರಕ್ಷಿಸುವ ವಿಧಾನಗಳನ್ನು ತಿಳಿದುಕೊಳ್ಳಬೇಕಿದ್ದರೆ ಇದೇ ಭಾನುವಾರ, ಜನವರಿ 10ರಂದು ಬಳ್ಳಾರಿ ರಸ್ತೆಯಲ್ಲಿ ಕೋಡಿಗೆಹಳ್ಳಿಗೆ ನೀವು ಬರಬೇಕು.

ಕ್ರೀಡೆ, ಮಾತುಗಾರಿಕೆ ಮತ್ತಿತರ ಕಲೆಗಾರಿಕೆಯಲ್ಲಿ ಲಿಮ್ಕಾ ಮತ್ತು ಗಿನ್ನೆಸ್ ಬುಕ್ ದಾಖಲೆ ಪ್ರವೇಶಿಸಿರುವ ಎಸ್ ರಮೇಶ್ ಬಾಬು ಅವರು ಬೆಕ್ಕುಗಳ ಪೋಷಣೆ ಮತ್ತು ರಕ್ಷಣೆ ಕುರಿತಂತೆ ವಿಚಾರ ಸಂಕಿರಣವನ್ನು ಆಯೋಜಿಸಿದ್ದಾರೆ.

ವಿಳಾಸ ಹೀಗಿದೆ : ಟಾಪ್ ಆಫ್ ದಿ ವರ್ಲ್ಡ್, ಸೆಂಟರ್ ಫಾರ್ ಎಕ್ಸೆಲೆನ್ಸ್, 201, ಸಾಧನೆ, 6ನೇ ಮುಖ್ಯ ರಸ್ತೆ, 6ನೇ ಅಡ್ಡರಸ್ತೆ, ಟಾಟಾನಗರ, ಕೋಡಿಗೆಹಳ್ಳಿ, ಬೆಂಗಳೂರು - 560 092. ಸಮಯ : ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.15. ಪ್ರವೇಶ ಉಚಿತವಿದೆ.

ಈ ವಿಚಾರ ಸಂಕಿರಣದಲ್ಲಿ ಬೆಕ್ಕುಗಳ ಕುರಿತು ಪಶು ತಜ್ಞರು ಬೆಕ್ಕುಗಳ ಮಾನಸಿಕ ಸ್ಥಿತಿ, ಅವುಗಳಿಗೆ ಅಂಟುವ ಜಾಡ್ಯಗಳು, ಶಸ್ತ್ರಚಿಕಿತ್ಸೆ ಮತ್ತು ಪರಿಹಾರ ಕುರಿತು ವಿಚಾರ ಮಂಡಿಸಲಿದ್ದಾರೆ. ಬೆಕ್ಕುಗಳನ್ನು ಬೆಳೆಸುವುದರಲ್ಲಿ ಪಳಗಿದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ವಿಡಿಯೋ, ಸ್ಲೈಡ್ ಶೋ ನೀಡಲಾಗುತ್ತಿದೆ. ಚಿತ್ರಕಲಾ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಮತ್ತೊಂದು ವಿಶೇಷವೇನೆಂದರೆ, ರಮೇಶ್ ಬಾಬು ಅವರೇ ಸಾಕಿ ಸಲುಹಿರುವ ತಾಯಿ ಮಾರ್ಜಾಲ ಮತ್ತು ಅದರ ಐದು ಮುದ್ದಾದ ಮರಿಗಳ ಆಟವನ್ನೂ ವೀಕ್ಷಿಸಬಹುದು.

ನೆನಪಿನಲ್ಲಿಡಿ, ಕೇವಲ ಐವತ್ತೇ ಸೀಟುಗಳು ಲಭ್ಯವಿರುವುದರಿಂದ ಮೊದಲು ಬಂದು ನೊಂದಾಯಿಸಿಕೊಂಡವರಿಗೆ ಆದ್ಯತೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :
ರಮೇಶ್ ಬಾಬು : 94490 13887
ಈಮೇಲ್ ವಿಳಾಸ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X