ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಯ ಹೊಡೆತಕ್ಕೆ ಉತ್ತರ ಪ್ರದೇಶ ತತ್ತರ, 125 ಸಾವು

By Staff
|
Google Oneindia Kannada News

Cold wave in northern India leaves over 125 dead
ನವದೆಹಲಿ, ಜ. 5 : ಕಳೆದ ನಾಲ್ಕು ದಿನಗಳಿಂದ ಉತ್ತರ ಭಾರತದ ಎಲ್ಲ ರಾಜ್ಯಗಳಲ್ಲಿ ಉಂಟಾಗಿರುವ ಕೊರೆಯುವ ಚಳಿಗೆ ಬರೋಬ್ಬರಿ 125 ಜನ ಸಾವನ್ನಪ್ಪಿದ್ದಾರೆ. ಉಷ್ಣಾಂಶ ಪಾತಾಳ ಕಂಡಿದ್ದು, ಮಂಜು ಹಾಗೂ ಚಳಿಗೆ ಸಾಮಾನ್ಯ ಜನಜೀವನ ಸಂಪೂರ್ಣ ನಲುಗಿ ಹೋಗಿದೆ. ಹಿಮಾಚಲ ಪ್ರದೇಶ, ಕಾಶ್ಮೀರ ರಾಜ್ಯಗಳಲ್ಲಿಂತೂ ಚಳಿಯ ಆರ್ಭಟ ಹೇಳತೀರದಾಗಿದೆ.

ರಾಜಧಾನಿ ನವದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಬಿಹಾರ್ ರಾಜ್ಯಗಳಲ್ಲಿ ಉಂಟಾಗಿರುವ ಚಳಿಗೆ ಜನತೆ ತತ್ತರಿಸಿಹೋಗಿದೆ. ಮಧ್ಯಾಹ್ನವಾದರೂ ಮಂಜು ಕವಿದು ಎದುರಿರುವವರು ಕಾಣದ ಸ್ಥಿತಿಯನ್ನು ನಿರ್ಮಾಣವಾಗಿದ್ದು, ಕಾಯಿಲೆ ಬಿದ್ದಿರುವ ವ್ಯಕ್ತಿಗಳು, ವೃದ್ಧರು ಪರಿಸ್ಥಿತಿಯಂತೂ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ. 8 ಬಿಹಾರ್ ಹಾಗೂ ಇಬ್ಬರು ಹರಿಯಾಣದಲ್ಲಿ ಮೃತಪಟ್ಟಿದ್ದಾರೆ. ಚಳಿಗೆ ತತ್ತರಿಸಿರುವ ಬಿಹಾರ್ ಮತ್ತು ಪಂಜಾಬನಲ್ಲಿ ಶಾಲಾ ಕಾಲೇಜುಗಳಿಗೆ ಮೂರು ದಿನಗಳ ರಜಾ ಘೋಷಿಸಲಾಗಿದೆ. ರಾಜಸ್ಥಾನದಲ್ಲಿ ಇದೇ ವಾತಾವರಣ ಮುಂದುವರೆದಿದ್ದು, ತಾಪಮಾನ ಕೇವಲ 7 ಡಿಗ್ರಿ ಸೆಲ್ಸಿಯಸ್ ಇದೆ. ಉಳಿದ ರಾಜ್ಯಗಳಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಟಿಲ್ಲ. ಮುಂದಿನ 24 ಗಂಟೆಗಳ ಕಾಲವೂ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X