ಹಂಪಿಯಲ್ಲಿ ಬಿಜೆಪಿ ಸಚಿವ ಸಂಪುಟ ಸಭೆ?
ಬೆಂಗಳೂರು,
ಜ. 4 : ರಾಜ್ಯದ ಗಡಿಜಿಲ್ಲೆ ಬೆಳಗಾವಿಯಲ್ಲಿ ಸಚಿವ ಸಂಪುಟ ನಡೆಸಿದ್ದ ಬಿಜೆಪಿ ಸರಕಾರ ಇದೀಗ ಐತಿಹಾಸಿಕ ಕೇಂದ್ರ ಹಂಪಿಯಲ್ಲಿ ಸಂಪುಟ ಸಭೆ ನಡೆಸಲು ಚಿಂತನೆ ನಡೆಸಿದೆ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ತಿಳಿಸಿದ್ದಾರೆ. id="toptextpromo">ಹಂಪಿಯ
ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಶ್ರೀಕೃಷ್ಣ ದೇವರಾಯರ ಪಟ್ಟಾಭೀಷೇಕದ 500ನೇ ವರ್ಷಾಚರಣೆ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜ.16 ಅಥವಾ 17ರಂದು ಸಭೆ ನಡೆಸುವ ಯೋಚನೆ ಇದೆ. ಶೀಘ್ರವೇ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದರು. ಕೃಷ್ಣ ದೇವರಾಯರ ವರ್ಷಾಚರಣೆಗೆ 30 ಕೋಟಿ ರುಪಾಯಿಗಳ ಅನುದಾನಕ್ಕೆ ಸರಕಾರ ಅನುಮೋದನೆ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಜ.27
ರಿಂದ 29ರವರೆಗೆ ನಡೆಯುವ ಮೂರು ದಿನಗಳ ಕಾರ್ಯಕ್ರಮಕ್ಕೆ 15 ಕೋಟಿ ರುಪಾಯಿ, ಪ್ರಚಾರಕ್ಕಾಗಿ, 3 ಕೋಟಿ ರುಪಾಯಿ ವೆಚ್ಚ ಮಾಡಲಾಗುವುದು. ಖ್ಯಾತ ಚಲನಚಿತ್ರ ನಟರು, ದೇಶ ವಿದೇಶಗಳಿಂದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಮಹೋತ್ಸವ ಕಾರ್ಯಕ್ರಮಗಳಿಗೆ 8 ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯನ್ನು ಬಸವಣ್ಣ ಮಂಟಪದ ಬದಲು ಗಾಯತ್ರಿ ಪೀಠದ ಬಳಿಯಲ್ಲಿರುವ ಬಯಲಿನಲ್ಲಿ ನಿರ್ಮಿಸಲಾಗಿದೆ ಎಂದು ರೆಡ್ಡಿ ಹೇಳಿದರು.











Click it and Unblock the Notifications