ಗದಗದಲ್ಲಿ ಫೆ.5ರಿಂದ ಕನ್ನಡ ಸಾಹಿತ್ಯ ಸಮ್ಮೇಳನ
ಗದಗ,
ಜ. 4 : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 5, 6 ಮತ್ತು 7ರಂದು ನಗರದಲ್ಲಿ ನಡೆಯಲಿದೆ ಎಂದು ಆರೋಗ್ಯ ಮತ್ತು ಗದಗ್ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರಿರಾಮುಲು ಹೇಳಿದ್ದಾರೆ. id="toptextpromo">ಸಮ್ಮೇಳನದ
ಸ್ವಾಗತ ಸಮಿತಿ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, ಸಮ್ಮೇಳನಕ್ಕೆ ಗ್ರಾಮ ಪಂಚಾಯತಿ ನೀತಿ ಸಂಹಿತೆ ಅಡ್ಡಿಯಾಗಬಹುದು. ಸಮ್ಮೇಳನ ದಿನಾಂಕದ ನಂತರ ಚುನಾವಣೆ ಅಧಿಸೂಚನೆ ಹೊರಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಅವರ ತಿಳಿಸಿದರು. ಸಮ್ಮೇಳನಕ್ಕೆ 5.96 ಕೋಟಿ ರುಪಾಯಿ ವೆಚ್ಚವಾಗಲಿದೆ. 42 ಉಪಸಮಿತಿಗಳನ್ನು ರಚಿಸಲಾಗಿದೆ. ಮೂರು ವಾರದಲ್ಲಿ ಸಿದ್ಧತೆ ಪೂರ್ಣವಾಗಲಿದೆ ಎಂದು ಶ್ರೀರಾಮಲು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>2009ರ
ಡಿಸೆಂಬರ್ 18ರಂದು ನಡೆಯಬೇಕಿದ್ದ ಸಮ್ಮೇಳನ ಉತ್ತರ ಕರ್ನಾಟಕ ನೆರೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಸಮ್ಮೇಳನಕ್ಕೆ ಸರಕಾರ 1.5 ಕೋಟಿ ರುಪಾಯಿ ನೀಡಲಿದೆ. ಜಿಲ್ಲೆಯ ಸರಕಾರಿ ನೌಕರರ ಒಂದು ದಿನ ಸಂಬಳ 65 ಲಕ್ಷ ರುಪಾಯಿ ಆಗುವುದು. ಉಳಿದ ಹಣವನ್ನು ಸ್ಥಳೀಯ ಸಂಸ್ಥೆಗಳು, ನಿಗಮಗಳು ಮತ್ತು ಖಾಸಗಿ ಕಂಪನಿಗಳು ಕಾರ್ಖಾನೆಗಳ ಮೂಲಕ ಪಡೆಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.











Click it and Unblock the Notifications