30ನೇ ಜಿಲ್ಲೆ : ಯಾದಗಿರಿ ಓದುಗರಿಗೆ ಹೊಸವರ್ಷದ ಶುಭಾಶಯ
ಗುಲ್ಬರ್ಗಾ,
ಡಿ. 31 : ಕೊನೆಗೂ ಯಾದಗಿರಿ ಜನರ ದಶಕಗಳ ಕನಸು ಕೈಗೂಡಿತು. ರಾಜ್ಯದ 30ನೇ ಜಿಲ್ಲೆಯಾಗಿ ಯಾದಗಿರಿ ಜಿಲ್ಲೆಯ ವಿಧ್ಯುಕ್ತವಾಗಿ ಉದಯವಾಯಿತು. ಬೆಳಗ್ಗೆ ಸರಿಯಾಗಿ 10 ಗಂಟೆಗೆ ಯಾದಗಿರಿ ಜಿಲ್ಲೆಯ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಾ ಕೆ ಡಿ ಜಗದೀಶ್ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. id="toptextpromo">ಯಾದಗಿರಿ
ನಗರದಲ್ಲಿದ್ದ ಸಹಾಯಕ ಆಯುಕ್ತರ ಕಚೇರಿಯನ್ನೇ ಜಿಲ್ಲಾಧಿಕಾರಿ ಕಚೇರಿಯನ್ನಾಗಿ ಬದಲಿಸಲಾಗಿದ್ದು, ಅಧಿಕಾರ ಹಸ್ತಾಂತರ ಮತ್ತು ನೂತನ ಜಿಲ್ಲಾ ಉದ್ಘಾಟನೆ ಸರಳ ಕಾರ್ಯಕ್ರಮದ ಮೂಲ ನರವೇರಿಸಲಾಯಿತು. ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಅವರ ಸಮ್ಮುಖದಲ್ಲಿ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಯಿತು. id='are-slot-1' class='oiad oi-axt oiadv'> id='top-searched-articles'>ಡಾ
ಜಗದೀಶ್ ಅವರ ಜೊತೆಗೆ ವಿವಿಧ ಇಲಾಖೆಗಳ 70 ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ತಮ್ಮ ತಮ್ಮ ನಿಗದಿತ ಕಚೇರಿಗಳಲ್ಲಿ ಅಧಿಕಾರ ಹಸ್ತಾಂತರ ಪ್ರಮಾಣ ಪತ್ರಕ್ಕೆ ಸಹಿ ಹಾಕುವ ಮೂಲಕ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಚಾಲನೆ ನೀಡಿದರು.











Click it and Unblock the Notifications