ಆಂಧ್ರದಲ್ಲಿ ಬಿಜೆಪಿಯಿಂದ ಜೈಆಂಧ್ರ ಚಳವಳಿ
ಹೈದರಾಬಾದ್,
ಡಿ. 28 : ಆಂಧ್ರಪ್ರದೇಶ ರಾಜಕೀಯದಲ್ಲಿ ಮತ್ತೊಂದು ಸಮಸ್ಯೆ ತಲೆದೋರಿದ್ದು, ಪ್ರತ್ಯೇಕ ತೆಲಂಗಾಣ ಚಳವಳಿ ಬಳಿಕ ಬಿಜೆಪಿ ಘಟಕ ರಾಯಲಸೀಮೆ ಮತ್ತು ಕರಾವಳಿ ಆಂಧ್ರ ವಲಯಕ್ಕೆ ರಾಜ್ಯ ಸ್ಥಾನಮಾನಕ್ಕಾಗಿ ಜೈಆಂಧ್ರ ಚಳವಳಿ ಆರಂಭಿಸಲು ತೀರ್ಮಾನಿಸಿದೆ. id="toptextpromo">ಬಿಜೆಪಿ
ಸಣ್ಣ ರಾಜ್ಯಗಳ ಪರವಾಗಿದ್ದು, ಪಕ್ಷ ಮಾಜಿ ಶಾಸಕ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ ಕೆ ಹರಿಬಾಬು ನೇತೃತ್ವದಲ್ಲಿ ಜನವರಿ 2ರಂದು ವಿಜಯವಾಡಾದಿಂದ ಜೈಆಂಧ್ರ ಚಳವಳಿ ಆರಂಭವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಂಡಾರು ದತ್ರಾತ್ರೇಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ಎರಡು ರಾಜ್ಯಗಳನ್ನು ನಿರ್ಮಿಸಬೇಕೆಂದು ಬಯಸುತ್ತದೆ. ಒಂದು ತೆಲಂಗಾಣವಾದರೆ ಇನ್ನೊಂದು ರಾಯಲಸೀಮೆ ಮತ್ತು ಕರಾವಳಿ ಆಂಧ್ರ ವಲಯಗಳನ್ನೊಳಗೊಂಡ ರಾಜ್ಯವಾಗಬೇಕು. ಪಕ್ಷದ ನೀತಿ ಸುಸ್ಪಷ್ಟವಿದೆ ಮತ್ತು ಅದು ಈ ನೀತಿಯಂತೆ ಚಳವಳಿ ಕೈಗೊಳ್ಳಲಿದೆ ಎಂದರು.











Click it and Unblock the Notifications