ಕಾವೇರಿ : ಕರುಣಾನಿಧಿಯಿಂದ ಮತ್ತೆ ಕ್ಯಾತೆ
ಚೆನ್ನೈ,
ಡಿ. 23 : ನಾನು ಹುಟ್ಟುವಾಗಲೇ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಾವೇರಿ ಸಮಸ್ಯೆ ಸೃಷ್ಟಿಯಾಗಿದೆ. ಅದು ಇತ್ಯರ್ಥವಾಗುವ ತನಕ ಹೋರಾಟ ಮುಂದುವರಿಸುತ್ತೇನೆ. ಅದಕ್ಕೆ ಮೊದಲು ವಿಶ್ರಾಂತಿಯ ಮಾತೇ ಇಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಮತ್ತೆ ಕಾವೇರಿ ಸಮಸ್ಯೆಯನ್ನು ಕೆದಕಿದ್ದಾರೆ. id="toptextpromo">ಮೆಟ್ಟೂರು
ಜಲಾಶಯದ ಅಮೃತ ಮಹೋತ್ಸವ ಆಚರಣೆಯನ್ನು ವೀಡಿಯೊ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿದ ಕರುಣಾ, ಕಾವೇರಿ ನೀರು ಹಂಚಿಕೆ ಸಂಬಂಧ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ರಾಜ್ಯ 1924ರಲ್ಲಿ ಒಪ್ಪಂದಕ್ಕೆ ಬಂದವು. ಅದರ ಜತೆಯಲ್ಲಿಯೇ ವಿವಾದವು ಸುತ್ತಿಕೊಂಡಿತು. ಅದೇ ವರ್ಷ ನಾನು ಸಹ ಹುಟ್ಟಿದೆ. ಈ ಬಿಕ್ಕಟ್ಟು ತಿಳಿಗೊಳ್ಳುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. 1910ರಲ್ಲಿ ಆಣೆಕಟ್ಟು ನಿರ್ಮಾಣ ಮಾಡಲು ಬ್ರಿಟಿಷ್ ಸರಕಾರ ಕರಡು ಸಿದ್ದಪಡಿಸಿತ್ತು. ಇದೆ ವೇಳೆ ಕೆಆರ್ಎಸ್ ಆಣೆಕಟ್ಟು ನಿರ್ಮಾಣಕ್ಕೆ ಮೈಸೂರು ಸರಕಾರ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇತ್ತ 1934 ರಲ್ಲಿ ಮೆಟ್ಟೂರು ಜಲಾಶಯ 6ಕೋಟಿರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿತು ಎಂದು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಾವೇರಿ
ನೀರು ನಂಬಿಕೊಂಡಿರುವ ತಮಿಳುನಾಡು ರೈತರ ಹಿತಾಸಕ್ತಿಯನ್ನು ಸರಕಾರ ಕಾಯಲಿದೆ. ಕಾವೇರಿ ಜಲಾಯನ ಪ್ರದೇಶದಲ್ಲಿ 5100 ಕೋಟಿ ರೂಪಾಯಿ ವೆಚ್ಚದಲ್ಲಿ ಅನೇಕ ಯೋಜನೆಗಳನ್ನು ನಾವು ಹಮ್ಮಿಕೊಂಡಿದ್ದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಕರುಣಾನಿಧಿ ಹೇಳಿದ್ದಾರೆ.











Click it and Unblock the Notifications