ಗೋಪಿನಾಥ್ ಮುಂಡೆ ಲೋಕಸಭೆ ಉಪನಾಯಕ
ನವದೆಹಲಿ,
ಡಿ. 22 : ಮಹಾರಾಷ್ಟ್ರದ ಗೋಪಿನಾಥ್ ಮುಂಡೆ ಅವರನ್ನು ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಉಪನಾಯಕರನ್ನಾಗಿ ನೇಮಿಸಲಾಗಿದೆ. ಈವರೆಗೆ ಲೋಕಸಭೆಯಲ್ಲಿ ಬಿಜೆಪಿ ನಾಯಕರಾಗಿದ್ದ ಎಲ್ ಕೆ ಆಡ್ವಾಣಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸುಷ್ಮಾ ಸ್ವರಾಜ್ ಪದೋನ್ನತಿ ಪಡೆದಿದ್ದಾರೆ. ಹೀಗಾಗಿ ಪ್ರತಿಪಕ್ಷದ ನಾಯಕನ ಸ್ಥಾನ ತೆರವಾಗಿತ್ತು. id="toptextpromo">ಲೋಕಸಭೆಯಲ್ಲಿ
ಬಿಜೆಪಿ ಉಪನಾಯಕನ ಸ್ಥಾನಕ್ಕೆ ಸಂಸದ ಹಾಗೂ ಕರ್ನಾಟಕದ ಧುರೀಣ ಅನಂತ್ ಕುಮಾರ್ ಹೆಸರೂ ಚಾಲ್ತಿಯಲ್ಲಿತ್ತು. ಮಹಾರಾಷ್ಟ್ರದ ರಾಜಕೀಯದಲ್ಲಿ ಮುಂಡೆ ಅವರಿಗಿಂತ ಕಿರಿಯರಾದ ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ ಎರಡು ದಿನಗಳ ನಂತರ ಮುಂಡೆ ಅವರಿಗೆ ಲೋಕಸಭೆಯಲ್ಲಿ ಈ ಪ್ರಮುಖ ಸ್ಥಾನ ನೀಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ಮಹಾರಾಷ್ಟ್ರದಲ್ಲಿ
ಇತರ ಹಿಂದುಳಿದ ಜಾತಿಗಳ ಪ್ರಮುಖ ನಾಯಕರಾಗಿರುವ ಮುಂಡೆ, ಮರಾಠಾವಾಡಾ ಪ್ರದೇಶದ ಬೀಡ್ ಲೋಕಸಭೆ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. 1995 ರಿಂದ 1999 ರ ನಡುವೆ ಮಹಾರಾಷ್ಟ್ರದಲ್ಲಿ ಬಿಜೆಪಿ -ಶಿವಸೇನೆ ಸರಕಾರದಲ್ಲಿ ಅವರು ಉಪಮುಖ್ಯಮಂತ್ರಿ ಆಗಿದ್ದರು.











Click it and Unblock the Notifications