ಸರಕಾರ ಪತನಗೊಳಿಸಲು ಎಚ್ಡಿಕೆ ಯತ್ನ?
ನವದೆಹಲಿ,
ಡಿ. 19 : ಮತ್ತೆ ರಾಜ್ಯ ಬಿಜೆಪಿ ಸರಕಾರದ ಸ್ಥಿತಿ ಡೋಲಾಯಮಾನವಾಗಿದ್ದು, ಈಗೋ ಆಗೋ ಪತನವಾಗುವ ಮಟ್ಟಕ್ಕೆ ಬಂದು ನಿಂತಿದೆ ಎನ್ನಲಾಗಿದೆ. ಭಿನ್ನಮತದ ಬೇಗೆಗೆ ಸಿಕ್ಕಿರುವ ಮುಖ್ಯಮಂತ್ರಿ ಒಂದು ಕಡೆ... ಇದರ ಲಾಭ ಪಡೆಯಲು ಯತ್ನ ನಡೆಸುತ್ತಿರುವ ರಾಜ್ಯದ ಜೆಡಿಎಸ್ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತೊಂದು ಕಡೆ... id="toptextpromo">ಎಲ್
ಕೆ ಅಡ್ವಾಣಿ ಅವರ ಉತ್ತರಾಧಿಕಾರಿಯಾದ ಸುಷ್ಮಾ ಸ್ವರಾಜ್ ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಮುಖ್ಯಮಂತ್ರಿ ಧಾವಿಸಿದ್ದರೆ, ರಾಜ್ಯ ಸರಕಾರ ಉರುಳಿಸುವ ತಂತ್ರವನ್ನು ಕಾಂಗ್ರೆಸ್ ಮುಖಂಡರ ಜೊತೆಗೂಡಿ ರೂಪಿಸಲು ಮಾಜಿ ಸಿಎಂ ಆಗಮಿಸಿದ್ದಾರೆ. ಬಿಜೆಪಿಯೊಳಗೆ ಹೊಗೆಯಾಡುತ್ತಿರುವ ಭಿನ್ನಮತದಿಂದಾಗಿ ರಾಜ್ಯ ಸರಕಾರ ಉರುಳಲಿದೆ ಎಂಬ ಭವಿಷ್ಯ ಕುಮಾರಸ್ವಾಮಿ ಅವರದ್ದು. id='are-slot-1' class='oiad oi-axt oiadv'> id='top-searched-articles'>ಆದರೆ,
ನನ್ನ ಸರಕಾರ ಸುಭದ್ರ ಐದು ವರ್ಷ ಆತಂಕವಿಲ್ಲ ಎಂಬ ಆತ್ಮವಿಶ್ವಾಸ ಯಡಿಯೂರಪ್ಪನವರದ್ದು. ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಅಜಾದ್ ಹಾಗೂ ಅಸ್ಕರ್ ಫರ್ನಾಂಡಿಸ್ ಅವರ ಜೊತೆ ಸೋಮವಾರ ರಾತ್ರಿಯೇ ಕುಮಾರಸ್ವಾಮಿ ಬಿಜೆಪಿ ಸರಕಾರ ಉರುಳಿಸುವ ಕುರಿತು ನಡೆಸಿದ್ದಾರೆ. ಈಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಗಾಗಿ ಕಾಯುತ್ತಿದ್ದಾರೆ ಎಂದು ದಿಲ್ಲಿ ಮೂಲಗಳು ತಿಳಿಸಿವೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರಕಾರ ಬೀಳಿಸಲು ಜೆಡಿಎಸ್ ಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.











Click it and Unblock the Notifications