ಇನ್ಫೋಸಿಸ್ ಬಿಪಿಓ ತೆಕ್ಕೆಗೆ ಮ್ಯಾಕ್ ಕೆಮಿಶ್

ಇದರಿಂದಾಗಿ ಜೀವವಿಮಾ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಇನ್ಫೋಸಿಸ್ ಬಿಪಿಓ ಪ್ರಮುಖ ಹೆಜ್ಜೆಯನ್ನಿಟ್ಟಂತಾಗಿದೆ ಮತ್ತು ಸೇವಾಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಸಹಕಾರಿಯಾಗಲಿದೆ. ಈ ಕೊಂಡುಕೊಳ್ಳುವಿಕೆಯಿಂದ ಜಾಗತಿಕ ಹೊರಗುತ್ತಿಗೆ ಕ್ಷೇತ್ರದಲ್ಲಿ ಇನ್ಫೋಸಿಸ್ ಬಿಪಿಓ ತನ್ನ ಇರುವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ ಎಂದು ಇನ್ಶುರನ್ಸ್, ಹಣಕಾಸು, ಹೆಲ್ತ್ ಕೇರ್ ವಿಭಾಗದ ಜಾಗತಿಕ ಮುಖ್ಯಸ್ಥರಾಗಿರುವ ರಿತೇಶ್ ಇದ್ನಾನಿ ಹೇಳಿದ್ದಾರೆ.
ಮ್ಯಾಕ್ ಕೆಮಿಶ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಓ ಆಗಿರುವ ಗಾರ್ಡನ್ ಬೆಕನ್ ಜ್ಯೂ. ಅವರು, ಇನ್ಫೋಸಿಸ್ ಅಂಥ ಮೌಲ್ಯವರ್ಧಿತ ಮೇರು ಸಂಸ್ಥೆಯೊಂದಿಗೆ ಕೆಲಸ ಮಾಡಲು ಸಂತಸವೆನಿಸುತ್ತದೆ. ಜಾಗತಿಕ ಮಟ್ಟದಲ್ಲಿ ನಮ್ಮ ಗ್ರಾಹಕರು ಇದರ ಲಾಭ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
(ಏಜೆನ್ಸೀಸ್)











Click it and Unblock the Notifications