ಟಾಟಾದಿಂದ ರಾಜ್ಯದಲ್ಲಿ 700 ಕೋಟಿ ಹೂಡಿಕೆ

ಉತ್ತಮ ಕೇಬಲ್ ವ್ಯವಸ್ಥೆ ಮತ್ತು ಎಕ್ಷಚೇಂಜ್ ನಲ್ಲಿ ಉನ್ನತ ಮಟ್ಟದ ತಂತ್ರಜ್ಞಾನದ ಬಗ್ಗೆ ಗಮನ ಹರಿಸಲಾಗುವುದು. ಕಳೆದ ಮೂರು ತಿಂಗಳಲ್ಲಿ ಚಂದಾದಾರರ ಸಂಖ್ಯೆ ಗಣನೀಯ ಮಟ್ಟದಲ್ಲಿ ಹೆಚ್ಚಿದೆ. ರಾಜ್ಯದ 450 ಪಟ್ಟಣ ಮತ್ತು 3000 ಹಳ್ಳಿಗಳಲ್ಲಿ ಈಗಾಗಲೇ ಡೊಕಾಮೊ ತನ್ನ ಕಾರ್ಯ ಆರಂಭಿಸಿದೆ ಎಂದು ಸಂಸ್ಥೆಯ ಅಧಿಕಾರಿ ಯತೀಶ್ ಮೆಹರೋತ್ರ ಹೇಳಿಕೆನೀಡಿದ್ದಾರೆ.
ಟಾಟಾ ಸಂಸ್ಥೆ ಸಿಡಿಎಂಎ ತಂತ್ರಜ್ಞಾನ ಆಧಾರಿತ ಮೊಬೈಲ್ ಗಳನ್ನು ಪರಿಚಯಿಸಿದ ನಂತರ ಜಿಎಸ್ ಎಂ ಮೊಬೈಲ್ ಗಳತ್ತ ಗಮನ ಹರಿಸಿತು. ಕಳೆದ ಮೂರು ತಿಂಗಳಲ್ಲಿ ಹೊಸ ಸಂಪರ್ಕ ಪಡೆದ ಗ್ರಾಹಕರಲ್ಲಿ ಶೇ.50 ರಷ್ಟು ಜಿಎಸ್ ಎಂ ಮೊಬೈಲ್ ಚಂದಾದಾರರಾಗಿದ್ದಾರೆ ಎಂದು ಮೆಹರೋತ್ರ ಹೇಳಿದರು.
(ಏಜೆನ್ಸೀಸ್)












Click it and Unblock the Notifications