ಅಲ್ಪಸಂಖ್ಯಾತರ ಉನ್ನತಿಗೆ ಸಾಂಗ್ಲಿಯಾನ ಪಣ

ಈಶಾನ್ಯ ಭಾರತ ಮೂಲದವರೊಬ್ಬರು ಈ ಹುದ್ದೆಗೇರುತ್ತಿರುವುದು ಇದೇ ಮೊದಲಾಗಿದೆ. ನಿಷ್ಠಾವಂತ ಪೊಲೀಸ್ ಅಧಿಕಾರಿ ಹಾಗೂ ಜನರ ಕಷ್ಟಕ್ಕೆ ಸ್ಪಂದಿಸುವ ಸಮಾಜಮುಖಿ ಕೆಲಸಕ್ಕೆ ಸಾಂಗ್ಲಿಯಾನ ಹೆಸರಾಗಿದ್ದಾರೆ. ಅಲ್ಪಸಂಖ್ಯಾತ ವರ್ಗಕ್ಕೆ ಸೇರುವ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಸಾಂಗ್ಲಿಯಾನ ತಿಳಿಸಿದರು.
ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ ಸಾಂಗ್ಲಿಯಾನ, ನಂತರ ಲೋಕಸಭೆಯಲ್ಲಿ ಅಣುಒಪ್ಪಂದ ನಿರ್ಣಯದ ಸಂದರ್ಭದಲ್ಲಿ ಯುಪಿಎ ಪರ ಮತ ಹಾಕಿದ್ದರು. ಕಳೆದ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಪ್ರತಿಸ್ಪರ್ಧಿ ಎದುರು ಸೋಲುಕಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications