ಗೋಹತ್ಯೆ ವಿಧೇಯಕ ಮಂಡನೆ ಸಿದ್ಧ

ಸದ್ಯ ಜಾರಿಯಲ್ಲಿರುವ ಕಾನೂನಿನಡಿ 12 ವರ್ಷ ಮೀರಿದ ಬಂಜೆ ಮತ್ತು ಅನುಪಯುಕ್ತ ರಾಸುಗಳ ಹತ್ಯೆ ಮತ್ತು ಮಾಂಸ ಮಾರಾಟಕ್ಕೆ ಅವಕಾಶವಿತ್ತು. ನಿಯಮ ಉಲ್ಲಂಘನೆಗೆ ಗರಿಷ್ಠ ಒಂದು ಸಾವಿರ ರುಪಾಯಿ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಆದರೆ, ಈ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಆರೋಗ್ಯವಂತ ರಾಸುಗಳಿಲ್ಲದೆ, ಎಳೆಯ ಕರುಗಳನ್ನು ರಾಜಾರೋಷವಾಗಿ ಹತ್ಯೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಭಾರಿ ಸಂಖ್ಯೆಯ ಜಾನುವಾರುಗಳು ನೆರೆ ರಾಜ್ಯಗಳ ಕಸಾಯಿಖಾನೆ ಪಾಲಾಗುತ್ತಿವೆ.
ಪ್ರಸ್ತಾವಿತ ವಿಧೇಯಕದಲ್ಲಿ ಗೋಹತ್ಯೆ ಕಸಾಯಿಖಾನೆಗೆ ಜಾನುವಾರು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘನೆ ಶಿಕ್ಷಾರ್ಹ ಮಾತ್ರವಲ್ಲ ಜಾಮಿನು ರಹಿತ ಅಪರಾಧ. ಆರೋಪ ಸಾಬೀತಾದರೆ, ಕನಿಷ್ಠ ಒಂದು ವರ್ಷದಿಂದ ಏಳು ವರ್ಷ ಜೈಲು, ಇದಲ್ಲದೆ, 25 ಸಾವಿರ ರುಪಾಯಿದಿಂದ ಗರಿಷ್ಠ ಒಂದು ಲಕ್ಷ ರುಪಾಯಿ ದಂಡ. ಅಪರಾಧ ಪ್ರಮಾಣ ಆಧರಿಸಿ ಎರಡನ್ನೂ ವಿಧಿಸಬಹುದು. ಎರಡನೇ ಬಾರಿ ಅಪರಾಧ ಸಾಬೀತಾದರೆ ಶಿಕ್ಷೆ ಮತ್ತು ದಂಡ ದುಪ್ಪಟ್ಟಾಗಲಿದೆ. ವಾರೆಂಟ್ ಇಲ್ಲದೆ ಆರೋಪಿಗಳನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications