ಬಸವಕಲ್ಯಾಣ ಹೆದ್ದಾರಿಯಲ್ಲಿ ಹೆಣಗಳ ರಾಶಿ

Basavakalyana Acident
ಬಸವಕಲ್ಯಾಣ, ಡಿ.11: ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಟಂಟಂ ಮತ್ತು ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹತ್ತು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಸವ ಕಲ್ಯಾಣ ಸಮೀಪದ ಹೈದರಾಬಾದ್ ಪುಣೆ ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಉಮೇಶ ( 36) ಲಾಲನ್ ಬಿ ( 40) ಮಮತಾ (18), ಗುಲಾಮ್ ನಬೀ ( 45) ಶಂಕು ಬೆಟ್ಟಗೇರ (30), ರಮೇಶ ( 20), ಹನುಮಂತ ( 45) ದಿಲೀಪ ಹಾಗೂ ರಮೇಶ ( 30) ಮೃತರು. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಬಸವ ಕಲ್ಯಾಣ ಸಮೀಪದ ಕೊಯನೂರು ಹಾಗೂ ಇತರೆ ಗ್ರಾಮಸ್ಥರನ್ನು ಹೊತ್ತೊಯ್ದಿದ್ದ ಟಂಟಂ ಬಸವ ಕಲ್ಯಾಣಕ್ಕೆ ಬರುತ್ತಿತ್ತು.

ರಾಷ್ಟ್ರೀಯ ಹೆದ್ದಾರಿ 9 ಸಸ್ತಾಪುರ ಬಂಗಲೆ ಬಳಿ ಹೋಗುತ್ತಿದ್ದ ವೇಳೆ ಹೈದರಾಬಾದ್‌ನಿಂದ ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಈ ದುರಂತರದಲ್ಲಿ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಇತರೆ ನಾಲ್ವರು ಬಸವ ಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆ ದಿದ್ದಾರೆ. ಕಳೆದ ವಾರವಷ್ಟೇ ಹತ್ತು ಮಂದಿಯನ್ನು ಬಲಿ ತೆಗೆದುಕೊಂಡಿದ್ದ ರಸ್ತೆ ಅಪಘಾತ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಬಸವ ಕಲ್ಯಾಣ ಸಂಚಾರಿ ಠಾಣೆ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+