ಬಳ್ಳಾರಿ ಬಿಟ್ಟು ಕದಲದಂತೆ ರೆಡ್ಡಿಗೆ ಸಿಬಿಐ ಸೂಚನೆ

Janardahn reddy
ಬೆಂಗಳೂರು, ಡಿ. 10 : ಆಂಧ್ರಪ್ರದೇಶದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಆರಂಭಗೊಂಡಿದ್ದು, ಬಳ್ಳಾರಿ ಗಣಿ ಉದ್ಯಮಿ ಎಸ್ ಕೆ ಮೋದಿ ಒಡೆತನದ ಎರಡು ಗಣಿಗಾರಿಕೆ ಪ್ರದೇಶಗಳ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ವಿವಾದಿತ ಓಬಳಾಪುರಂ ಮೈನಿಂಗ್ ಕಂಪನಿಯ ಮಾಲೀಕರಾಗಿರುವ ಪ್ರವಾಸೋಧ್ಯಮ ಸಚಿವ ಜಿ ಜನಾರ್ದನರೆಡ್ಡಿ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಂಪನಿಯ ವಿರುದ್ಧ ಗಂಭೀರ ಆರೋಪಗಳಿರುವ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವರೆಗೆ ಬಳ್ಳಾರಿಯಿಂದ ಹೊರಹೋಗದಂತೆ ರೆಡ್ಡಿ ಅವರಿಗೆ ತನಿಖಾ ತಂಡ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಅಲ್ಲಿನ ಸರಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರವನ್ನು ಕೋರಿತ್ತು. ಇತ್ತೀಚೆಗೆ ಕೇಂದ್ರ ಈ ಪ್ರಕರಣನ್ನು ಸಿಬಿಐ ತನಿಖೆಗೆ ವಹಿಸಿತ್ತು.

ಬಳ್ಳಾರಿ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ವಿವಾದಿತ ಓಎಂಸಿ ಕರ್ನಾಟಕ, ಅಂಧ್ರಪ್ರದೇಶ ನಡುವಿನ ಗಡಿ ಗುರುತುಗಳನ್ನು ನಾಶ ಮಾಡಿದೆ ಎಂದು ಆಂಧ್ರ ಸರಕಾರ ಒಪ್ಪಿಕೊಂಡಿದೆ. ಇಧರ ತನಿಖೆಗಾಗಿ ಅಲ್ಲಿನ ಸರಕಾರ ನೇಮಿಸಿದ್ದ ಉನ್ನತ ಮಟ್ಟದ ತ್ರಿಸದಸ್ಯ ಸಮಿತಿ, ಓಎಂಸಿ ಕರ್ನಾಟಕದ ಗಡಿ ಭಾಗವನ್ನು ಒತ್ತುವರಿ ಮಾಡಿದೆ ಎಂಬ ಅಭಿಪ್ರಾಯವನ್ನು ದಾಖಲಿಸಿದೆ. ಆಂಧ್ರಪ್ರದೇಶದ ವಿಶೇಷ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ ಸಾಮಿ ರೆಡ್ಡಿ, ಹೆಚ್ಚುವರಿ ಅರಣ್ಯ ಅಧಿಕಾರಿಗಳಾದ ಓಂಕಾರ್ ಸಿಂಗ್ ಮತ್ತು ಎಸ್ ಬಿ ಎಲ್ ಮಿಶ್ರಾ ಅವರನ್ನು ಒಳಗೊಂಡ ಸಮಿತಿ ಇತ್ತೀಚೆಗೆ ಸರಕಾರಕ್ಕೆ ನೀಡಿದ ವರದಿಯಲ್ಲಿ ಈ ಅಂಶ ಅಡಕವಾಗಿದೆ ಎಂದು ಹೇಳಲಾಗಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+