ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ವರ್ಷ 140 ಖೈದಿಗಳಿಗೆ ಮರಣದಂಡನೆ

By Staff
|
Google Oneindia Kannada News

Over 140 sentenced to death last year in the country
ನವದೆಹಲಿ, ಡಿ. 8 : ಕಳೆದ ವರ್ಷ ದೇಶದಲ್ಲಿ ವಿವಿಧ ಅಪರಾಧಗಳಲ್ಲಿ ತೊಡಗಿಸಿಕೊಂಡು ಪೋಲೀಸರ ಅತಿಥಿಗಳಾಗಿದ್ದ 140 ಖೈದಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 36 ಜನರಿಗೆ ಮರಣದಂಡನೆ ಶಿಕ್ಷೆ ನೀಡುವ ಮೂಲಕ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಮಹಾರಾಷ್ಟ್ರ 29 , ಮಧ್ಯಪ್ರದೇಶ 17 , ಉತ್ತರಪ್ರದೇಶ 15 , ದೆಹಲಿ 13 ನಂತರದ ಸ್ಥಾನದಲ್ಲಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮೇಕನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

10 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಕಿಅಂಶ ಈ ಪಟ್ಟಿಯಲ್ಲಿಲ್ಲ. ಕಳೆದ ಮೂರು ವರ್ಷಗಳಲ್ಲಿ 456 ಖೈದಿಗಳಿಗೆ ಈ ಶಿಕ್ಷೆ ನೀಡಲಾಗಿದೆ, ಆದರೆ ಇದುವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಚಿವ ಮೇಕನ್ ಹೇಳಿಕೆ ನೀಡಿದ್ದಾರೆ. ಸಚಿವರು ನೀಡಿದ ಅಂಕಿ ಅಂಶಗಳ ಪ್ರಕಾರ 2006ರಲ್ಲಿ 129, 2007ರಲ್ಲಿ 186 ಮತ್ತು 2008ರಲ್ಲಿ 141 ಖೈದಿಗಳು ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಒಟ್ಟಾರೆ ಕಳೆದ ಮೂರೂ ವರ್ಷಗಳಲ್ಲಿ ಮಹಾರಾಷ್ಟ್ರ 78, ಉತ್ತರ ಪ್ರದೇಶ 69 ಮತ್ತು ಕರ್ನಾಟಕ 63 ಖೈದಿಗಳಿಗೆ ಈ ಶಿಕ್ಷೆ ನೀಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X