ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಆಡಳಿತಕ್ಕೆ ಯಡಿಯೂರಪ್ಪ ಸಿಎಂ ಚಾಲನೆ

By Staff
|
Google Oneindia Kannada News

BSy inaugurates KS WAN
ಚಾಮರಾಜನಗರ, ಡಿ. 8 : ರಾಜ್ಯದ ಮಹತ್ವಾಕಾಂಕ್ಷೆ ಯೋಜನೆಯಾದ 'ಕರ್ನಾಟಕ ರಾಜ್ಯ ವಿಸ್ತೃತ ಜಾಲ'(ಕೇಸ್ವಾನ್)ಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ವಿನೂತನವಾಗಿ ಚಾಲನೆ ನೀಡಿದ್ದಾರೆ. ನಂತರ ಮುಖ್ಯಮಂತ್ರಿ ಮತ್ತು ರಾಜ್ಯಪಾಲರೊಂದಿಗೆ ವೀಡಿಯೋ ಮುಖಾಂತರ ಸಂಭಾಷಣೆ ನಡೆಯಿತು. ಯುಡಿಯೂರಪ್ಪ ಅವರು ಸಾಂಕೇತಿಕವಾಗಿ ವಿಜಾಪುರದ ಉಪ ವಿಭಾಗಾಧಿಕಾರಿ ಪಾಟೀಲರೊಂದಿಗೆ ಸಂವಾದ ನಡೆಸಿದರು.

ಕೇಸ್ವಾನ್‌ಗೆ ಚಾಲನೆ ನೀಡಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದ ಸುಮಾರು 2300 ಕಚೇರಿಗಳಿಗೆ ಕೇಸ್ವಾನ್ ವಿದ್ಯುನ್ಮಾನ ಸಂಪರ್ಕ ಲಭ್ಯವಾಗಲಿದೆ ಎಂದರು. ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆಯಿಂದ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಸಾಧ್ಯ. ಸರಕಾರ ಇ-ಆಡಳಿತ ಮುಖಾಂತರ ಕೇಸ್ವಾನ್ ಜಾಲವನ್ನು ಅಭಿವೃದ್ಧಿಗೊಳಿಸುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಕ್ರಾಂತಿಕಾರಕ ಹೆಜ್ಜೆ ಇಡುವ ಮೂಲಕ ಹೊಸ ಯೋಜನೆ ರೂಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಮಾಹಿತಿ ಹೆದ್ದಾರಿಯೊಂದನ್ನು ಸೃಷ್ಠಿಸುವಲ್ಲಿ ರಾಜ್ಯ ಸರ್ಕಾರ ಇ-ಆಡಳಿತ ಕೇಂದ್ರವು ಕೇಸ್ವಾನ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಧ್ವನಿ ಮತ್ತು ದೃಶ್ಯ ಸೇವೆಗಳೊಂದಿಗೆ ಕುಳಿತಲ್ಲಿಯೇ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X