ಅರ್ಸೆಲರ್ ಕಂಪನಿಗೆ ಹಸಿರು ನಿಶಾನೆ

ಮೂವತ್ತು ಸಾವಿರ ಕೋಟಿ ರೂಪಾಯಿ ಯೋಜನೆಯ ಜಾರಿಗೆ ರಾಜ್ಯ ಸರಕಾರ ಸಕಲ ನೆರವನ್ನು ಒದಗಿಸುತ್ತದೆ. ಭೂಸ್ವಾಧೀನ, ಗಣಿಗಾರಿಕೆಯ ಭೋಗ್ಯ ಸೇರಿದಂತೆ ಎಲ್ಲಾ ಅನುಮೋದನೆಗಳನ್ನು ಈ ತಿಂಗಳ ಅಂತ್ಯದೊಳಗೆ ನೀಡಲಾಗುವುದು ಎಂದು ಕೈಗಾರಿಕೆ ಅಭಿವೃದ್ದಿ ಇಲಾಖೆಯ ಆಯುಕ್ತರು ಹೇಳಿಕೆ ನೀಡಿದ್ದಾರೆ.
ಮಿತ್ತಲ್ ಯೋಜನೆಯ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತ್ಯೇಕ ಸಮಿತಿ ರಚಿಸಿದ್ದು, ಗಣಿಗಾರಿಕೆ ಭೋಗ್ಯ ಸೇರಿದಂತೆ ಅರ್ಜಿಯನ್ನು ಈಗಾಗಾಲೇ ಅನುಮೋದಿಸಿದೆ ಹಾಗೂ ಈ ತಿಂಗಳ ಅಂತ್ಯದೊಳಗೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ನೀಡಲಾಗುವುದು. ಆರ್ಸೆಲರ್ ಮಿತ್ತಲ್ ಕಂಪನಿಯ ವಾರ್ಷಿಕ 60 ಲಕ್ಷ ಟನ್ ಸಾಮರ್ಥ್ಯದ ಘಟಕ ಸ್ಥಾಪನೆ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಆಯುಕ್ತ ರಾಜಕುಮಾರ್ ಖತ್ರಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications