ಕುಮಾರಸ್ವಾಮಿ ಡಕಾಯಿತ, ಜನಾರ್ದನರೆಡ್ಡಿ

ತಾಲ್ಲೂಕಿನ ರೂಪನಗುಡಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೆಡ್ಡಿ, ಇತ್ತೀಚೆಗೆ ಗಣಿ ಬಗ್ಗೆ ಕುಮಾರಸ್ವಾಮಿ ಅವರ ಆರೋಪಕ್ಕೆ ರೆಡ್ಡಿ ತಿರುಗೇಟು ನೀಡಿದರು. ಅಕ್ರಮ ಗಣಿಗಾರಿಕೆಗೆ ಹಾಗೂ ಒಎಂಸಿ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಬಗ್ಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 2006 ರಲ್ಲಿ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದೆ. ಕುಮಾರಸ್ವಾಮಿ ವಿರುದ್ಧವೂ ಸಿಬಿಐ ನಡೆಸುವಂತೆ ಕೋರಿದ್ದೆ. ಅದೇ ಕಾರಣಕ್ಕೆ ಕುಮಾರಸ್ವಾಮಿ ತಮ್ಮ ನಿರ್ಧಾರಕ್ಕೆ ವಿರುದ್ಧವಾಗಿದ್ದಾರೆ ಎಂದು ಹೇಳಿದರು.
150 ಕೋಟಿ ರುಪಾಯಿ ಲಂಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಡರ ಕುಟುಂಬದ ಭ್ರಷ್ಟಾಚಾರಗಳ ವಿರುದ್ಧ ನ್ಯಾಯಾಲಯಕ್ಕೆ ಸಾಕಷ್ಟು ಪುರಾವೆಗಳನ್ನು ಕೊಟ್ಟಿದ್ದು, ಇಷ್ಟರಲ್ಲಿಯೇ ತೀರ್ಮಾನ ಹೊರಬೀಳಲಿದೆ. ಹೀಗಾಗಿ ಗೌಡರ ಕುಟುಂಬ ಜೈಲಿಗೆ ಹೋಗೋದು ಖಚಿತ ಎಂದು ಜನಾರ್ದನರೆಡ್ಡಿ ವಿಶ್ವಾಸದಿಂದ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications