ಏಡ್ಸ್ ಪೀಡಿತ ಮಕ್ಕಳನ್ನು ದತ್ತು : ಶ್ರೀರಾಮುಲು

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಏಚ್ ಐವಿ ಮತ್ತು ಏಡ್ಸ್ ಪೀಡಿತ ಪೋಷಕರ ಮಕ್ಕಳನ್ನೂ ಸಹ ತೆಗೆದುಕೊಳ್ಳಲಾಗುವುದು. ಅವರ ಆರೈಕೆ ಮತ್ತು ಆರೋಗ್ಯ ವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ಬುದ್ಧಿಮಾಂದ್ಯ ಮಕ್ಕಳು ಮತ್ತು ವೃದ್ಧರಿಗಾಗಿ ಆಶ್ರಮ ನಡೆಸುತ್ತಿದ್ದೇನೆ. ಇದೇ ಮಾದರಿಯಲ್ಲಿ ಎಚ್ ಐವಿ ಮತ್ತು ಏಡ್ಸ್ ಪೀಡಿತ ಮಕ್ಕಳನ್ನೂ ದತ್ತು ತೆಗೆದುಕೊಳ್ಳುತ್ತೇನೆ. ಅವದ ಜೀವನ ಕಲ್ಯಾಣಕ್ಕೆ ಹೆಚ್ಚಿನ ಅಧ್ಯತೆ ನೀಡುತ್ತೇನೆ. ಭಯಾನಕ ರೋಗದಿಂದ ಬಳಲುತ್ತಿದ್ದೇನೆ ಎಂದು ಆತಂಕಪಡುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು ಎಂದು ಶ್ರೀರಾಮುಲು ಸಲಹೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications