ಭ್ರಷ್ಟರ ಮೇಲೆ ದಾಳಿ 7 ಕೋಟಿ ವಶ

ಗುಲ್ಬರ್ಗಾ, ಬೆಳಗಾವಿ, ಮೈಸೂರು, ದಾವಣಗೆರೆ, ಬೆಂಗಳೂರು, ರಾಮನಗರ, ಹಾಸನ, ಬೀದರ್ ಹಾಗೂ ತುಮಕೂರಿನಲ್ಲಿ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಪೊಲೀಸರು ಏಳು ಭ್ರಷ್ಟ ತಿಮಿಂಗಲುಗಳನ್ನು ಬಲೆಗೆ ಬೀಳಿಸಿಕೊಂಡಿದ್ದು, 7 ಕೋಟಿಗೂ ಹೆಚ್ಚು ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ಹೇಳಿದರು.
ಗುಲ್ಬರ್ಗಾದ ದೈಹಿಕ ಶಿಕ್ಷಣಾಧಿಕಾರಿ ಪ್ರತಾಪ್ ಸಿಂಗ್ ತಿವಾರಿ, ಚಾಮರಾಜನಗರ ಜಿಲ್ಲಾಧಿಕಾರಿಗಳ ಸಹಾಯಕ ಅಧಿಕಾರಿ ನಾಗಪ್ಪ ಸಿರಸಗಿ, ಹಾಸನದ ಕೆಎಸ್ಎಫ್ ಸಿ ಸಹಾಯಕ ಮ್ಯಾನೇಜರ್ ಬಿ ಸಿ ಶಾಂತಕುಮಾರ್, ಬೆಂಗಳೂರು ಹಾಪ್ ಕಾಮ್ಸ್ ನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ದೇವರಾಜ್, ಬೆಳಗಾವಿ ಮೋಟಾರು ವಾಹನ ನಿರೀಕ್ಷಕ ದಯಾನಂದ ನರಸಣ್ಣವರ್, ಶಿವಮೂಗ್ಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಭಿಯಂತರ ಶ್ರೀಕಾಂತ್ ಮೈಸೂರು ಹಾಗೂ ಧಾರವಾಡದ ಕೆಐಎಡಿಬಿಯಲ್ಲಿ ಇಂಜಿನಿಯರ್ ಶಿವಲಿಂಗಯ್ಯ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಈವರೆಗೆ ಬಂದಿರುವ ಮಾಹಿತಿ ಪ್ರಕಾರ ಭ್ರಷ್ಟ ಅಧಿಕಾರಿಗಳಿಂದ 7 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನು ಪರಿಶೀಲನೆ ಮುಂದುವರೆದಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications