ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಕೊಟ್ಟ ಸರ್ವರ್ ; ಕ್ಯಾಟ್ ಪರೀಕ್ಷೆಗೆ ವಿಘ್ನ

By Staff
|
Google Oneindia Kannada News

Server crashes, CAT exam 2009 cancelled
ಬೆಂಗಳೂರು, ನ. 28 : ಸರ್ವರ್ ಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಐಐಎಂ ನಡೆಸುವ ಆನ್ ಲೈನ್ Common Admission Test(ಕ್ಯಾಟ್)ಗೆ ವಿಘ್ನ ಉಂಟಾಗಿದೆ. ಬೆಂಗಳೂರು, ಚೆನ್ನೈ, ಭೂಪಾಲ್ , ಮುಂಬೈ, ಕೋಲ್ಕತ್ತಾ ಸೇರಿದಂತೆ ಹಲವೆಡೆ ಅಭ್ಯರ್ಥಿಗಳು ಪರೀಕ್ಷೆ ಬರೆಯಲಾಗದೆ ಹತಾಶರಾಗಿ, ಐಐಎಂ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೋಮೆಟ್ರಿಕ್ ಸಂಸ್ಥೆ ತಯಾರಿಸಿದ ಆನ್ ಲೈನ್ ಪರೀಕ್ಷೆ ತಂತ್ರಾಂಶದಲ್ಲಿ ವ್ಯತ್ಯಯವಾದ ಕಾರಣ ಅಭ್ಯರ್ಥಿಗಳು ಲಾಗ್ ಇನ್ ಆಗಲು ವಿಫಲರಾದರು. ಐದಾರು ಗಂಟೆಗಳ ಕಾಲ ಸುಮ್ಮನೆ ಕೂತು ಕಾಲದೂಡಬೇಕಾದ ಪರಿಸ್ಥಿತಿ ಉಂಟಾಯಿತು. ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನ 250 ವಿದ್ಯಾರ್ಥಿಗಳು, ವಿವೇಕಾನಂದ ಕಾಲೇಜಿನ 60 ವಿದ್ಯಾರ್ಥಿಗಳು ಕ್ಯಾಟ್ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಬೆಂಗಳೂರು ಮಾತ್ರವಲ್ಲ ಉತ್ತರ ಕರ್ನಾಟಕದಿಂದ ಕೂಡ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದರು.

ವಿದ್ಯಾರ್ಥಿಗಳ ಆಕ್ರೋಶಕ್ಕೆ ಸ್ಪಂದಿಸಿದ ಐಐಎಂ ಹಾಗೂ ಪ್ರೋಮೆಟ್ರಿಕ್ ಸಂಸ್ಥೆಗಳು ಪರೀಕ್ಷೆಗಳನ್ನು ಪುನಃ ನಡೆಸುವ ಭರವಸೆ ನೀಡಿವೆ. ಜಿ ಮ್ಯಾಟ್ ಮಟ್ಟಕ್ಕೆ ಕ್ಯಾಟ್ ಪರೀಕ್ಷೆ ನಡೆಸುವ ಐಐಎಂ ಉದ್ದೇಶಕ್ಕೆ ಆರಂಭದಲ್ಲಿ ಅಡ್ಡಿಯಾಗಿದೆ ಎನ್ನಬಹುದು. ಕ್ಯಾಟ್ ವಿಘ್ನಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್, ಇಂದು ಪರೀಕ್ಷೆಯಿಂದ ವಂಚಿತರಾದವರು ಮುಂದಿನ 9 ದಿನಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಬಹುದು ಎಂದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X