ಭಾರತದಲ್ಲಿ ಪಾಕಿಸ್ತಾನದ ಬಿಳಿ ಆನೆ

Ajmal Amir Kasab
ಮುಂಬೈ, ನ. 26 : ನವೆಂಬರ್ 26, 2008 ಭಾರತದ ಇತಿಹಾಸದ ಕರಾಳ ದಿನ. ಪಾಕಿಸ್ತಾನ ಮೂಲದ ಉಗ್ರರು ಮುಂಬೈ ಬಂದಿಳಿದ ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ 180ಕ್ಕೂ ಹೆಚ್ಚೂ ಮಂದಿ ಸಾವನ್ನಪ್ಪಿದರು. ಈ ಕೃತ್ಯದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಮುಂಬೈನ ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಆರೋಗ್ಯದಿಂದ ಬೇಕು, ಬೇಡವಾಗಿದ್ದನ್ನು ತಿಂದುಂಡು ದಷ್ಟಪುಷ್ಟವಾಗಿದ್ದಾನೆ. ಈ ಉಗ್ರನಿಗೆ ಮಹಾರಾಷ್ಟ್ರ ಸರಕಾರ ಈ 365 ದಿನ ಖರ್ಚು ಮಾಡಿದ ರೊಕ್ಕದ ಲೆಕ್ಕ ಬರೋಬ್ಬರಿ 31 ಕೋಟಿ ರು ದಾಟಿದೆ !!

ಕಸಬ್ ಸಿಕ್ಕ ನಂತರ ಮಹಾರಾಷ್ಟ್ರ ಸರಕಾರ ಖರ್ಚು ಮಾಡಿದ ಒಟ್ಟು 30 ಕೋಟಿ ರುಪಾಯಿಗಳು, ಅಂದರೆ, ಪ್ರತಿದಿನ 85 ಲಕ್ಷ ರುಪಾಯಿಗಳು. 21 ವರ್ಷದ ಪಾಕಿಸ್ತಾನ ಮೂಲಕ ಪರೀದಕೋಟ್ ನಗರದ ಈ ಉಗ್ರನಿಗೆ ಲಷ್ಕರ್ ಇ ತೊಯ್ಬಾ ಸಂಘಟನೆ ನಂಟಿರುವುದು ವಿಚಾರಣೆ ಸ್ಪಷ್ಟವಾಗಿದೆ. ಕಸಬ್ ಸೇರಿದಂತೆ ರಾಜ್ಯ ಮತ್ತು ದೇಶದ ಹಿತ ಮುಖ್ಯ, ಹಣದ ಲೆಕ್ಕಕ್ಕಿಂತಲೂ ದೇಶಧ ಸಮಗ್ರತೆ ಅತಿಮುಖ್ಯ, ಹಾಗಾಗಿ ಕಸಬ್ ಗೆ ಖರ್ಚು ಮಾಡಿದ ಹಣಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸರಕಾರದ ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಅನಿಸಿಕೆಯಾಗಿದೆ.

ಕಸಬ್ ನ ರಕ್ಷಣೆಗಾಗಿ ಆರ್ಥರ್ ರಸ್ತೆ ಜೈಲಿಗೆ ಬಿಗಿ ಭದ್ರತೆ, ಆತನ ಆರೋಗ್ಯ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಯಲ್ಲಿ ಭದ್ರತೆಗಾಗಿ ವಿನಿಯೋಗಿಸಿದ ಹಣ, ಆತನ ಆರೋಗ್ಯ ಪರೀಕ್ಷೆಗಾಗಿ ತಜ್ಞ ವೈದ್ಯರಿಗೆ ನೀಡಿದ ಹಣ, ರಾಜ್ಯ ಮತ್ತು ಕೇಂದ್ರಿಯ ಮೀಸಲು ಪಡೆ ಎಲ್ಲವೂ ಸೇರಿದರೆ ಕಸಬ್ ಗೆ ಸರಕಾರ 31 ಕೋಟಿ ರುಪಾಯಿ ವ್ಯಯಿಸಿದೆ. ಇದು ದುಬಾರಿಯಾದರೂ ಅನಿವಾರ್ಯ ಎಂದು ಅವರು ಹೇಳಿದರು.

26/11 ರ ಕರಾಳ ದಿನದ ವರ್ಷಾಚರಣೆ ಇಂದು. ಈ ಸಮರದಲ್ಲಿ ಹೇಮಂತ್ ಕರ್ಕರೆ, ವಿಜಯ್ ಸಲಸ್ಕರ್, ಅಶೋಕ್ ಕಾಮ್ಟೆ, ಸಂದೀಪ್ ಉನ್ನಿಕೃಷ್ಣನ್ ನಂತಹ ಸೇನಾನಿಯನ್ನು ಕಳೆದುಕೊಂಡ ದಿನ. ಇದು ಅತ್ಯಂತ ನೋವಿನ ಸಂಗತಿ. ದೇಶಕ್ಕಾಗಿ ಪ್ರಾಣ ಕಳೆದುಕೊಂಡು ಸೇನಾನಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದು 110 ಕೋಟಿ ಭಾರತೀಯರ ಮಹದಾಸೆಯಾಗಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+