ಬಾಬ್ರಿ ಮಸೀದಿಗೆ ಸ್ಥಳ ಕೊಡಿ, ಇಮಾಮ್ಸ್ ಕೌನ್ಸಿಲ್

ಲಿಬರ್ಹಾನ್ ಆಯೋಗ ವರದಿಯನ್ನು ಸಂಸತ್ ನಲ್ಲಿ ಪ್ರಸ್ತುತಪಡಿಸಿ ಅದರಲ್ಲಿ ಸೂಚಿಸಿರುವಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಈ ಜಾಗಗಳನ್ನು ಮುಸ್ಲಿಮರ ಹಿತಕ್ಕಾಗಿ ಮಾತ್ರ ಬಳಸಬೇಕು ಎಂದು ಅವರು ಒತ್ತಾಯಿಸಿದರು.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಮುಸ್ಲಿಂ ಧಾರ್ಮಿಕ ಪಂಡಿತರ ಸಂಘಟನೆಯಾಗಿದ್ದು, ಶಿಕ್ಷಣ, ಸಾಮಾಜಿಕ ಸ್ಥಿತಿಗತಿ, ಆರ್ಥಿಕತೆ ಮುಂತಾದ ಕ್ಷೇತ್ರದಲ್ಲಿ ಹಿಂದುಳಿದಿರುವ ಮುಸ್ಲಿಂ ಸಮುದಾಯವನ್ನು ಸಂಪೂರ್ಣ ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ ಎಂದು ರಶಾದಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications