ಕಸಬ್ ಸಿಕ್ಕರೆ ಕೊಂದು ಬಿಡುವೆ, ಗ್ರೇಟ್ ಖಲಿ

Kasab should be sent to gallows, says Khali
ಮುಂಬೈ, ನ. 22 : ನನ್ನ ನೂರಾರು ಸಹೋದರ-ಸಹೋದರಿಯರ ಸಾವಿಗೆ ಕಾರಣವಾಗಿರುವ ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ನನ್ನು ನನ್ನ ಕೈಗೊಪ್ಪಿಸಿದರೆ ಸ್ಥಳದಲ್ಲೇ ಆತನನ್ನು ಕೊಂದು ಹಾಕುತ್ತೇನೆ ಎಂದು ಡಬ್ಲ್ಯು ಡಬ್ಲ್ಯು ಇ ಕುಸ್ತಿಪಟು ಗ್ರೇಟ್ ಖಲಿ ಅಲಿಯಾಸ್ ದಿಲೀಪ್ ಸಿಂಗ್ ರಾಣಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯವನ್ನು ರಕ್ಷಿಸಲು ಕಾನೂನು ಇದೆ ಎಂಬುದು ನನಗೆ ಗೊತ್ತು. ಆದರೂ ಕಸಬ್ ನನ್ನು ಗಲ್ಲಿಗೇರಿಸಬೇಕು ಎಂದು ನಾನು ಬಯಸುತ್ತೇನೆ ಎಂದು 50 ನಗರದಲ್ಲಿನ ಸರಕಾರೇತರ ಸಂಸ್ಥೆಗಳು ಆಯೋಜಿಸಿದ್ದ ಮುಂಬೈ ಶಾಂತಿ ಓಟ ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಮುಂಬೈಯಲ್ಲಿನ ನನ್ನ ಸಹೋದರ-ಸಹೋದರಿಯರ ಹತ್ಯೆಗೆ ಕಸಬ್ ಜವಾಬ್ದಾರ. ಆತನನ್ನು ಸ್ಥಳದಲ್ಲೇ ಕೊಂದು ಹಾಕುತ್ತೇನೆ ಎಂದರು.

ಕಳೆದ ವರ್ಷ ನವೆಂಬರ್ 26 ರಂದು ನಡೆದ ಮುಂಬೈ ಉಗ್ರರ ದಾಳಿಯ ವರ್ಷಾಚರಣೆಯನ್ನು ನಗರದಲ್ಲಿ ನಡೆಸಲಾಗುತ್ತಿದ್ದು, ಇದಕ್ಕೆ ಮುಂಬೈ ಶಾಂತಿ ಓಟ ಎಂದು ಹೆಸರಿಡಲಾಗಿದೆ. ಹೋಟೆಲ್ ತಾಜ್ ಟ್ರೈಡೆಂಟ್ , ನಾರಿಮನ್ ಹೌಸ್ ಗಳಿಗೆ ನಡೆದ ದಾಳಿಯಲ್ಲಿ 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು. ಎರಡು ದಿನಗಳ ಕಾಲ ನಡೆದಿದ್ದ ಉಗ್ರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ನಡೆದ ಕಾಳಗದಲ್ಲಿ ಒಂಬತ್ತು ಉಗ್ರರನ್ನು ಹಾಕಲಾಗಿತ್ತು. ಕಸಬ್ ಮಾತ್ರ ಜೀವಂತವಾಗಿ ಸಿಕ್ಕಿಬಿದ್ದಿದ್ದ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+