ರಾಜ್ಯ ಮಹಿಳಾ ತಂಡಕ್ಕೆ ಖೋಖೋ ಟ್ರೋಫಿ

ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಮಾರ್ಗೋವಾ (ಗೋವಾ)ದಲ್ಲಿ ನಡೆದ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕರ್ನಾಟಕ ಖೋಖೋ ತಂಡವು ಪದಕಗಳನ್ನು ಗಳಿಸಿ ರಾಜ್ಯಕ್ಕೆ ಗೌರವ ತಂದು ಕೊಟ್ಟಿದೆ.
ವಿಜೇತ ತಂಡದಲ್ಲಿನ ಆಟಗಾರರು ಆಶಾ ಕೆ. ಆರ್., ಲಾವಣ್ಯ.ಡಿ., ಅರ್ಪಿತಾ ಕೆ.ಆರ್., ರಶ್ಮಿ ಕೆ.ಸಿ., ಎನ್. ತೇಜಸ್ವಿನಿ, ಕೆ.ಎನ್. ದೀಪಾ, ಎಲ್. ಅನಿತಾ, ಆರ್.ಎಸ್. ದೀಪಾ, ಎಲ್. ಮಹಾದೇವಿ, ಎಸ್. ಶೃತಿ, ಆರ್. ಆಶಾ, ಎಸ್.ಎಂ. ಕಾವ್ಯ. ಶ್ರೀಧರ್ ಅವರು ತರಬೇತುದಾರರು.
(ದಟ್ಸ್ ಕನ್ನಡ ಕ್ರೀಡಾವಾರ್ತೆ)












Click it and Unblock the Notifications