ಪೊಲೀಸ್ ವಶಕ್ಕೆ ನಕ್ಸಲ್ ಕಿರಣ್

ಬಂಧಿತ ಕಿರಣ್ ಕುಮಾರನಿಂದ ಕೆಲವು ಕರಪತ್ರಗಳು ಮತ್ತು ಇನ್ನಿತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆ ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಕಿರಣ್‌ಕುಮಾರನನ್ನು ಪೊಲೀಸರು ಬಂಧಿಸಿದ್ದರು. ಈತ ನಕ್ಸಲ್ರಿಗೆ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿದ ಆರೋಪವಿದೆ. ಹಲವು ಗುಮಾನಿಗಳಿಗೆ ಗಿರಿತೋರುವ ಇವನ ಮತ್ತು ಇವನ ಸಹಚರರ ಚಲನವಲಗಳ ಕೆಲವು ಸ್ಯಾಂಪಲ್ಲುಗಳು ಇಂತಿವೆ :
ಅ ) ಹಸುರು ಮತ್ತು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರೊಂದು ಯೂಸುಫ್ ಚಲಾಯಿಸುತ್ತಿದ್ದ ಕಾರಿಗೆ ಅಡ್ಡವಾಗಿ ಬರುತ್ತದೆ. ಈ ಕಾರಿನಿಂದ ಕೆಳಕ್ಕಿಳಿದ ಮೂವರು ಯೂಸುಫ್ ಚಲಾಯಿಸುತ್ತಿದ್ದ ಕಾರಿನಲ್ಲಿ ಹತ್ತಿಕೊಳ್ಳುತ್ತಾರೆ. ಚಾಲಕ ಯೂಸುಫ್‌ನನ್ನು ಹಿಂದಕ್ಕೆ ಕೂರಿಸಿ ಬಹಳ ಸುಮ್ಮನೆ ಕುಳಿತು ದ್ರುಪದಮ್ಮನ ದೇವಸ್ಥಾನದ ಜಾಗದಿಂದ ಗಾಡಿಕೊಪ್ಪದತ್ತ ಹೊರಡುತ್ತಾರೆ. ಇಲ್ಲಿ ಎಲ್ಲಿಯೂ ಕೂಗಾಟ ರೇಗಾಟಗಳಿರುವುದಿಲ್ಲ. ಗಾಡಿಕೊಪ್ಪದತ್ತ ಸಾಗಿದ ಬೊಲೆರೋ ಕಾರು ಅಲ್ಲಿನ ಎಡಭಾಗದಲ್ಲಿ ಮಣ್ಣಿನ ರಸ್ತೆಯೊಂದಕ್ಕೆ ತಿರುಗುತ್ತದೆ. ಈ ಕಾರಿನ ಹಿಂದೆಯೇ ಆರೋಪಿಗಳ ಕಾರು ಹಿಂಬಾಲಿಸುತ್ತದೆ. ಜನರಿಲ್ಲದ ಸ್ಥಳದಲ್ಲಿ ಬೊಲೆರೋ ಕಾರು ನಿಂತ ಮೇಲೆ ಕಾರಿನಲ್ಲಿ ಹತ್ತಿದ್ದ ಮೂವರು ಆರೋಪಿಗಳು ಕಾರಿನ ಡ್ಯಾಷ್ ಬೋರ್ಡಿನಲ್ಲಿದ್ದ ಹಣದ ಪ್ಯಾಕೆಟ್‌ನ್ನು ಪಡೆದು ತಾವು ತಂದಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಶಿವಮೊಗ್ಗದತ್ತ ತೆರಳುತ್ತಾರೆ.
ಆ ) ಬಂಟ್ವಾಳ ತಾಲ್ಲೂಕಿನ ಪಿರಂಗಿ ಪೇಟೆಯ ಅಮೇಮಾರ್ ಹೌಸ್ ವಾಸಿಯಾಗಿರುವ ಅಬ್ದುಲ್ ರೆಹಮಾನ್ ಎಂಬುವವರ ಮಗ ಕೆ.ಯೂಸುಫ್ 36 ವರ್ಷದ ಯುವಕ. ಈತ ಒಂದು ಅದ್ಭುತವಾದ ಕಥೆಯನ್ನು ಎಫ್.ಐ.ಆರ್. ಮೂಲಕ ಬರೆಸಿದ್ದಾನೆ. ಇಲ್ಲಿ ಘಟನೆ ನಡೆದಿರುವುದು ಒಂದಾದರೆ ಜಗತ್ತಿಗೆ ಬಿಂಬಿಸಲ್ಪಡುತ್ತಿರುವುದು ನೂರು ರೀತಿಯಲ್ಲಿ. ಬೆಂಗಳೂರಿನಿಂದ ಬಂದ ಕಾರೆಂದು ಹೇಳಲಾಗುತ್ತಿರುವ ಬೊಲೆರೋ ಕಾರು ಬೆಂಗಳೂರಿನಿಂದ ಶಿವಮೊಗ್ಗದವರೆಗೆ ಅಪಹರಿಸಲ್ಪಟ್ಟಿಲ್ಲ. ಆದರೆ ಶಿವಮೊಗ್ಗದ ಅಫ್ಸರ್ ವಾಸವಾಗಿರುವ ಟಿಪ್ಪುನಗರದ ಸಮೀಪದಲ್ಲಿಯೇ ಬರುವ ದ್ರುಪದಮ್ಮನ ದೇವಸ್ಥಾನದ ಬಳಿಯಲ್ಲಿಯೇ ಕಾರು ಅಪಹರಿಸಲ್ಪಿಟ್ಟಿತು. ಇಲ್ಲಿ ಚಾಲಕ ಕೂಗಲಿಲ್ಲ. ಕೊನೆ ಪಕ್ಷ ಅನಾಮಿಕರಾದ ಹಾಗೂ ಅಪರಿಚಿತರೂ ಆದ ಮೂವರು ಆರೋಪಿಗಳು ತನ್ನ ಕಾರಿನಲ್ಲಿ ಬಲವಂತವಾಗಿ ಕುಳಿತುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದ ಚಾಲಕ ಕೆ.ಯೂಸುಫ್ ಮತ್ತು ಆತನ ಜೊತೆಗಿದ್ದ ಸಂತೋಷ್ ಸಣ್ಣದೊಂದು ವಿರೋಧವನ್ನೂ ವ್ಯಕ್ತಪಡಿಸಲಿಲ್ಲ ಎಂಬುದೇ ಇಡೀ ಪ್ರಕರಣದ ವಿಶೇಷ ಅನುಮಾನಕ್ಕೆ ಕಾರಣವಾದ ಒಂದು ಅಂಶ.
ಇ ) ಮೂವರು ಅಪರಿಚಿತ ಅಪಹರಣಕಾರರು ಬೊಲೆರೋ ಕಾರಿನಲ್ಲಿದ್ದ ಹಣದ ಪ್ಯಾಕೆಟ್‌ನ್ನು ಮಾತ್ರ ಅಪಹರಿಸಲಿಲ್ಲ. ಅದರ ಜೊತೆಗೆ ಕೆ.ಯೂಸುಫ್‌ನ ನೋಕಿಯಾ ಮೊಬೈಲ್ ಸೆಟ್ ಮತ್ತು ಎಲ್‌ಜಿ ಮೊಬೈಲ್ ಸೆಟ್‌ನ್ನು ಅಪಹರಿಸಿದ್ದಾರೆ. ಅಂತೆಯೇ ಯೂಸುಫ್‌ನ ಜೊತೆಗಿದ್ದ ನೋಕಿಯಾ ಮೊಬೈಲ್ ಸೆಟ್ ಮತ್ತು ಚೈನಾ ಸೆಟ್‌ನ್ನು ಅಪಹರಿಸಿದ್ದಾರೆ. ಇದೆಲ್ಲದರೊಂದಿಗೆ ತುಂಗಾನಗರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶ್ರೀನಿವಾಸ್ ಇಡೀ ಪ್ರಕರಣದಲ್ಲಿ ಅನುಮಾನಾಸ್ಪದ ಪಾತ್ರ ವಹಿಸುತ್ತಿದ್ದಾರೆ.
ಈ ) ಕಾರನ್ನೇ ಅಪಹರಿಸಿ, ಅದರೊಳಗಿದ್ದ ಹಣವನ್ನು ದರೋಡೆ ಮಾಡಿದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆ ಮೂವರು ಆರೋಪಿಗಳು ಬಂದಿದ್ದ ಸ್ಕಾರ್ಪಿಯೋ ಕಾರಿನ ನಂಬರ್ ಏನು ಎಂದರೆ ಕೆ.ಯೂಸುಫ್ ಅದನ್ನೂ ತೇಲಿಸಿದ್ದಾನೆ. ಕೆ.ಎ.17-6 ಎಂದಷ್ಟೇ ತಿಳಿಸಿದ್ದಾನೆ. ಇನ್ನುಳಿದ ನಂಬರ್ ಕಾಣಲಿಲ್ಲ ಎಂಬ ಮಾತನ್ನು ಹೇಳಿದ್ದಾನೆ.
ಇಷ್ಟೆಲ್ಲದರ ನಡುವೆ ಹಣ ಪಡೆಯಬೇಕಿದ್ದ ಟಿಪ್ಪುನಗರದ ವಾಸಿ ಅಫ್ಸರ್ ದರೋಡೆಯ ಘಟನೆ ನಡೆದ ಕೂಡಲೇ ಊರು ಬಿಟ್ಟಿದ್ದೇಕೆ? ಅಂದರೆ, ನಿಜವಾಗಲೂ ದರೋಡೆ ಮಾಡಿದುದು ಯಾರು? ಅಫ್ಸರ್ ಬಗ್ಗೆ ಶಿವಮೊಗ್ಗದಲ್ಲಿ ಸಾರ್ವಜನಿಕರು 'ಮಲೆನಾಡಿನ ದಾವೂದ್ ಇಬ್ರಾಹಿ' ಎಂದೇ ಕರೆಯುತ್ತಾರೆ. ಈ ಶಿವಮೊಗ್ಗದ ದಾವೂದ್ ಇಬ್ರಾಹಿಂ ಬಗ್ಗೆ ತಿಳಿಯಲು ನಾಳೆಯವರೆಗೆ ನೀವು ಕಾಯಲೇ ಬೇಕು.
(ದಟ್ಸ್ ಕನ್ನಡ ವಾರ್ತೆ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications