ರೆಡ್ಡಿಗೆ ಸಡ್ಡು ಹೊಡೆದು ಸಭೆ ತೊರೆದ ಶಾಸಕ

ನೆರೆ ಪರಿಹಾರ ಕಾರ್ಯದ ಪ್ರಗತಿ ಬಗ್ಗೆ ನಾಡಗೌಡ ಅವರು ಮಾಡುತ್ತಿದ್ದ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಲು ಹೇಳಿದ ಕರುಣಾಕರ ರೆಡ್ಡಿ, ಸಂಕ್ಷಿಪ್ತವಾಗಿ ಹೇಳಿ ಮುಗಿಸಲು ಸೂಚಿಸಿದರು. ಇದರಿಂದ ಅಪಮಾನಗೊಂಡ ನಾಡಗೌಡ ಅವರು "ರಾಜಕಾರಣದಲ್ಲಿ 25 ವರ್ಷದ ಅನುಭವ ತಮಗೆ ಇದ್ದು, ಹೇಗೆ ಮಾತನಾಡಬೇಕು, ಎಷ್ಟು ಮಾತನಾಡಬೇಕು ಎಂಬ ಅರಿವಿದೆ. ನಾನು ಈ ಸಭೆಯನ್ನು ತ್ಯಜಿಸುತ್ತೇನೆ. ನನ್ನ ಮುಂದಿನ ಮಾತು ಸಂಪುಟ ಸಭೆಯಲ್ಲಿ ಮಾತ್ರ" ಎಂದು ಹೇಳುತ್ತಾ ಸಭೆಯಿಂದ ಹೊರನಡೆದರು. ನಾಡಗೌಡ ಅವರನ್ನು ಕಾಂಗ್ರೆಸ್ಸಿನ ಪರಿಷತ್ ಸದಸ್ಯ ಎಸ್ ಆರ್ ಪಾಟೀಲ್ ಹಿಂಬಾಲಿಸಿದರು.
ಇದಕ್ಕೂ ಪರಿಹಾರ ಕಾರ್ಯಗಳ ಪ್ರಗತಿಯ ಬಗ್ಗೆ ಅಭಿಪ್ರಾಯ ಮಂಡಿಸಲಾಯಿತು. ಎಸ್ ಕೆ ಬೆಳ್ಳುಬ್ಬಿ, ಎಂಎಲ್ಎ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಬಬಲೇಶ್ವರದ ಶಾಸಕ ಎಂಬಿ ಪಾಟೀಲ್ ಅಭಿಪ್ರಾಯ ಮಂಡಿಸಿದ ಪ್ರಮುಖರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications