ಹೊನ್ನಾವರ ಬಳಿ ಭೀಕರ ರಸ್ತೆ ಅಪಘಾತ

ಬ್ರೇಕ್ ಫೇಲ್ ಆಗಿರುವ ಶಂಕೆ:ಸುಮಾರು 80 ಜನರಿದ್ದ ಬಸ್ ಶಿವಮೊಗ್ಗದಿಂದ ಬಂಗಾರುಮಕ್ಕಿಗೆ ತೆರಳುತ್ತಿತ್ತು. ವೀರಾಂಜನೆಯ ದೇವಸ್ಥಾನದಲ್ಲಿ ದೇವರಿಗೆ ಸಿಎಂರಿಂದ ಸುವರ್ಣಕವಚ ಅರ್ಪಣೆ ಕಾರ್ಯಕ್ರಮವಿದೆ. ಕಾರ್ತಿಕ ಸೋಮವಾರದ ವಿಶೇಷ ಪೂಜೆಗೆ ಬಸ್ ನಲ್ಲಿದ್ದ ಬಹುತೇಕ ಜನರು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ನೆರವಿಗೆ ಬಂದ ಸಚಿವ ಹರತಾಳು ಹಾಲಪ್ಪ: ಬಸ್ ದುರಂತದ ಕೆಲ ನಿಮಿಷ ನಂತರ ಅದೇ ಹಾದಿಯಲ್ಲಿ ಬಂದ ಸಚಿವ ಹರತಾಳ್ ಹಾಲಪ್ಪ ಅವರು ತಮ್ಮ ಬೆಂಗಾವಲು ಕಾರುಗಳಲ್ಲಿ ಗಾಯಾಳುಗಳನ್ನು ಸ್ಥಳೀಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಒಯ್ದು, ಪ್ರಥಮ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಅಂಬ್ಯುಲೆನ್ಸ್ ಸ್ಥಳಕ್ಕೆ ತಲುಪಲು ಸುಮಾರು ಒಂದೂವರೆ ಗಂಟೆಯಾದರೂ ಬೇಕು. ಇದು ನಿರ್ಜನ ಪ್ರದೇಶ, ಮಣಿಪಾಲ್ ಆಸ್ಪತ್ರೆ ಹಾಗೂ ಗೇರುಸೊಪ್ಪೆ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಜನರ ರಕ್ಷಣೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications