ಪ್ರೀತಿ ಕೊಂದ ಮದುಮಗ ಈ ಕಥೆ ವಿಲನ್

ನಂದಿನಿಲೇಔಟ್ ನ ಸರಸ್ವತಿ ಪುರಂ ನಿವಾಸಿ ಪ್ರಿಯಾಂಕಾ ವಂಚನೆಗೊಳಗಾದ ಯುವತಿ. ಪ್ರಿಯಾಂಕಾ ಮನೆಯೆದುರಿನ ಮನೆಯ ಆನಂದ್ ವಂಚಿಸಿದ ಯುವಕ. ಕಳೆದ ನಾಲ್ಕು ವರ್ಷಗಳಿಂದ ಪ್ರಿಯಾಂಕಾ ಮತ್ತು ಆನಂದ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಾಂಕಾ ಬಿಬಿಎಂ ವಿದ್ಯಾರ್ಥಿನಿಯಾಗಿರುವಾಗಲೇ ಆನಂದ್ ಆಕೆಯ ಬೆನ್ನು ಬಿದ್ದು ಕಾಡಿಬೇಡಿ ಪ್ರೀತಿಸಲು ಆರಂಭಿಸಿದ. ಸಲುಗೆ ಹೆಚ್ಚಾಯಿತು. ಅದು ಲೈಂಗಿಕ ಸಂಬಂಧದವರೆಗೂ ಮುಂದುವರಿಯಿತು. ಪ್ರಿಯಾಂಕಾ ಇದೀಗ ಗರ್ಭಿಣಿಯಾಗಿದ್ದಾಳೆ.
ಆನಂದ್ ಮದುವೆ ಪ್ರಕ್ರಿಯೆಗಳು ಆರಂಭವಾದ ನಂತರ ಪ್ರಿಯಾಂಕಾ ಮತ್ತ ಆಕೆಯ ಸಹೋದರಿಯರಾದ ಆಶಾ ಮತ್ತು ವೇದ ಸೇರಿಕೊಂಡು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆದರೆ, ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಜೊತೆಗೆ ಇಂತಹ ಅನೇಕ ಘಟನೆಗಳು ಬೆಂಗಳೂರಿನಲ್ಲಿ ನೂರೆಂಟು ನಡೆಯುತ್ತಿವೆ ಎನ್ನುವ ಉಡಾಫೆಯ ಮಾತು ಆಡಿದ್ದಾರೆ. ದೂರು ಕೊಟ್ಟು ಹೋಗಿ ನಾವೆಲ್ಲ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸರು ಪ್ರಿಯಾಂಕಾ ಮತ್ತು ಆಕೆಯ ಸಹೋದರಿಯರನ್ನು ಸಾಗಹಾಕಿದ್ದಾರೆ.
ಇಂದು ರಾಜಾಜಿನಗರ ಕಲ್ಯಾಣ ಮಂಟಪವೊಂದರಲ್ಲಿ ಆನಂದ ಮದುವೆ ಗೊತ್ತಾಗಿತ್ತು. ಆನಂದ್ ನ ಜೊತೆಗೆ ಮಾತನಾಡಬೇಕು ಎಂದು ಕಲ್ಯಾಣ ಮಂಟಪಕ್ಕೆ ಬಂದ ಪ್ರಿಯಾಂಕಾ ಮತ್ತು ಆಕೆ ಸಹೋದರಿಯನ್ನು ಆನಂದ್ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತನಗೆ ಅನ್ಯಾಯವಾಗಿರುವುದರಿಂದ ಪ್ರಿಯಾಂಕಾ ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಅವರಿಗೆ ದೂರು ನೀಡಿದ್ದಾರೆ. ಬಿದರಿ ಅವರು ಪ್ರಕಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಆನಂದ್ ವಂಚಿಸಿರುವುದು ಸಾಬೀತಾದರೆ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತವೆ ಎಂದು ಭರವಸೆ ನೀಡಿದ್ದಾರೆ.
ನಾನು ಮತ್ತು ಆನಂದ್ ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೇವು. ನಿನ್ನೆ ಮೊನ್ನೆಯವರಿಗೂ ಮದುವೆಯಾಗುವುದಾಗಿ ಹೇಳಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಾನೀನ ಗರ್ಭೀಣಿಯಾಗಿದ್ದೇನೆ. ನನಗೀಗ ನ್ಯಾಯ ಬೇಕು. ಕಾನೂನು ಪ್ರಕಾರ ಹೋರಾಟ ನಡೆಸುವೆ ಎಂದು ವಂಚನೆಗೊಳಗಾಗಿರುವ ಪ್ರಿಯಾಂಕಾ ಮಾಧ್ಯಮಗಳ ಹೇಳಿದರು. ಅಲ್ಲದೇ, ಆನಂದ್ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಆರೋಪಗಳ ದೂರನ್ನು ಸಲ್ಲಿಸಿವೆ ಎಂದು ಅವರು ಹೇಳಿದರು. ವಿಶೇಷವೆಂದರೆ, ರಾಜ್ಯ ಪ್ರಮುಖ ವಾರ್ತಾ ವಾಹಿನಿಯೊಂದು ಪ್ರಿಯಾಂಕಾ ಬೆನ್ನಿಗೆ ನಿಂತಿವೆ. ಈ ವಾಹಿನಿ ಶುಕ್ರವಾರ ದಿನವೀಡಿ ಪ್ರಿಯಾಂಕಾ ಪುರಾಣವನ್ನೆ ಪ್ರಸಾರ ಮಾಡಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications