ನಮಗೆ ರೆಡ್ಡಿಗಳೇ ಬಾಸ್, ಭಿನ್ನಮತೀಯರು
ಬೆಂಗಳೂರು,
ಅ. 9 : ನಾವು ಮುಂದೆ ಕೂಡ ಬಳ್ಳಾರಿ ರೆಡ್ಡಿಗಳ ಅಣತಿಯಂತೆ ನಡೆಯುತ್ತೇವೆ. ನಮಗೆ ಒಳ್ಳೆದಾಗಲಿ ಅಥವಾ ಕೆಟ್ಟದಾಗಲಿ ನಾವಂತೂ ಬಳ್ಳಾರಿ ಸಚಿವರುಗಳ ಮಾತನ್ನು ಮೀರುವುದಿಲ್ಲ. ನಮಗೆ ಅವರೇ ಬಾಸ್ ಎಂದು ಹೈದಾರಾಬಾದಿನಲ್ಲಿ ತಂಗಿದ್ದ ಭಿನ್ನಮತೀಯ ಶಾಸಕರು ನಗರಕ್ಕೆ ವಾಪಾಸಾದ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. id="toptextpromo">ಕಳೆದ
ಐದಾರು ದಿನಗಳಿಂದ ಹೈದರಾಬಾದಿನಲ್ಲಿ ಠಿಕಾಣಿ ಹೂಡಿದ್ದ ಭಿನ್ನಮತೀಯ ಶಾಸಕರು ಇಂದು ಜನಾರ್ದನ ರೆಡ್ಡಿ ಅವರೊಂದಿಗೆ ನಗರಕ್ಕೆ ಹಿಂದಿರುಗಿದರು. ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಟ್ಟು, ಬಳಿಗಾರ್ ಅವರನ್ನು ವರ್ಗಾಯಿಸಿದ್ದಕ್ಕಾಗಿ ಭಿನ್ನಮತೀಯ ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರದ ವರಿಷ್ಠರು ನೀಡಿದ ಬೆಂಬಲಕ್ಕೆ ಎಲ್ಲಾ ಶಾಸಕರುಗಳು ಕೃತಜ್ಞತೆ ಸಲ್ಲಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications