ಇದಕ್ಕೆಲ್ಲಾ ಜಗದೀಶ್ ಶೆಟ್ಟರ್ ಕಾರಣ: ಸಿಎಂ
ನವಲಗುಂದ,
ನ. 5 : ನಾನೇನು ತಪ್ಪು ಮಾಡಿರುವೆ ಎಂದು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ? ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ನವೆಂಬರ್ 7 ರಂದು ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ ನಡೆಸುವ ಮೂಲಕ ಜನರೆದುರು ವಾಸ್ತವಾಂಶ ಬಿಚ್ಚಿಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. id="toptextpromo">ನವಲಗುಂದ
ತಾಲ್ಲೂಕು ಅರಹಟ್ಟಿ, ಗುಡಿಸಾಗರ ಗ್ರಾಮಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಿನ ಎಲ್ಲ ಬೆಳವಣಿಗೆಗಳಿಗೆ ಜಗದೀಶ್ ಶೆಟ್ಟರ್ ಕಾರಣ ಎಂದು ಆರೋಪಿಸಿದರು. ಕೆಲ ದಿನಗಳ ಹಿಂದೆಯೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಕಾರಣಾಂತರದಿಂದ ವಿಳಂಬವಾಗಿದ್ದನ್ನೇ ದಾಳವಾಗಿಸಿಕೊಂಡ ರೆಡ್ಡಿ ಸಹೋದರರು ಅವರನ್ನು ಎತ್ತಿ ಕಟ್ಟಿದ್ದಾರೆ ಎಂದು ಆರೋಪಿಸಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications