ನಾಯಕತ್ವ ಬದಲಾವಣೆ ಏಕೆ ? ಸಿಎಂ ಬಣ

ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಹೇಳಿಕೊಂಡೇ ನಾವು ವಿಧಾನಸಭೆ ಚುನಾವಣೆ ಎದುರಿಸಿದ್ದೇವೆ. ಈ ಕಾರಣಕ್ಕಾಗಿ ರಾಜ್ಯದ ಜನ ಆಶೀರ್ವದಿಸಿದ್ದಾರೆ. ಹೀಗಿರುವಾಗ ಬದಲಾವಣೆ ಏಕೆ? ಒಂದು ವೇಳೆ ನಾಯಕತ್ವ ಬದಲಾವಣೆ ಆಗಬೇಕು ಎನ್ನುವುದಾದರೆ ಚುನಾವಣೆ ಮೂಲಕ ಜನಾಭಿಪ್ರಾಯ ಕೇಳಬೇಕಾಗುತ್ತದೆ ಎಂದು ಸಚಿವರಾದ ಹರತಾಳು ಹಾಲಪ್ಪ, ಉಮೇಶ್ ಕತ್ತಿ ಮತ್ತು ಬಿಎನ್ ಬಚ್ಚೇಗೌಡ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬುಧವಾರ ಹೇಳಿದರು.
ಹೀಗಿದ್ದೂ ರೆಡ್ಡಿಗಳ ಬಳಗ ಬದಲಾವಣೆಗೆ ಪಟ್ಟು ಹಿಡಿದಿದೆ. ಹೈಕಮಾಂಡ್ ಹೇಳಿಕೆಗೆ ತಲೆಬಾಗಿ ಹೈದರಾಬಾದ್ ನ ರೆಸಾರ್ಟ್ ನಲ್ಲಿರುವ ಸಚಿವ, ಶಾಸಕ ಮಿತ್ರರು ವಾಪಸ್ ಬಂದು ಒಟ್ಟಾಗಿ ಸರಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕಳೆದ 25 ವರ್ಷಗಳಿಂದ ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಸಿಟ್ಟು ಮೊದಲಿನಿಂದಲೂ ಇದೆ. ವರ್ತನೆ ಬದಲಿಸಿಕೊಳ್ಳುತ್ತೇನೆ ಎಂದು ಅವರೇ ಹೇಳಿರುವುದರಿಂದ ಪಟ್ಟು ಸಡಿಲಿಸಿಕೊಳ್ಳುವುದು ಒಳಿತು ಎಂದು ಈ ಮೂರು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications