ಮಡಿಕೇರಿಯಲ್ಲಿ ಸರಣಿ ಹಂತಕ ಮೋಹನ್ ವಿಚಾರಣೆ

Serial killer Mohan Kumar
ಮಡಿಕೇರಿ, ನ. 2 : ಸರಣಿ ಕೊಲೆಗಳ ಆರೋಪಿ ಮೋಹನ್ ಕುಮಾರನನ್ನು ದಕ್ಷಿಣ ಕನ್ನಡ ಸೋಲೀಸರು ಭಾನುವಾರ ಮಡಿಕೇರಿಗೆ ಕರೆದುಕೊಂಡು ಬಂದಿದ್ದಾರೆ. ಸುಮಾರು 20 ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿರುವ ಮೋಹನ್, ದಕ ಪೊಲೀಸರಿಗೆ ತಿಳಿಸಿರುವ ಪ್ರಕಾರ ಪ್ರಕಾರ ಕೊಡಗು ಪ್ರಾಂತ್ಯದಲ್ಲಿ ಐದು ಕೊಲೆ ಮಾಡಿದ್ದಾನಂತೆ. ಹಾಗಾಗಿ, ಹೆಚ್ಚಿನ ತನಿಖೆಗಾಗಿ ಆತನನ್ನು ಮಡಿಕೇರಿಗೆ ತರಲಾಗಿದೆ.

ಮಡಿಕೇರಿ ಬಸ್ ನಿಲ್ದಾಣನಲ್ಲಿ ನಾಲಕ್ಕು ಮತ್ತು ಕುಶಾಲನಗರದಲ್ಲಿ ಒಂದು ಕೊಲೆ ಮಾಡಿರುವುದಾಗಿ ಅವನು ತಿಳಿಸಿದ್ದಾನೆ. ಎಸಿಪಿ ಚಂದ್ರಪ್ಪ ಮತ್ತು ತಂಡ ಆರೋಪಿಯನ್ನು ಪುತ್ತೂರಿನಿಂದ ಜೀಪಿನಲ್ಲಿ ಅವನನ್ನು ಮಡಿಕೇರಿಗೆ ಭಾನುವಾರ ತಂದರು. ಕುಶಾಲನಗರಕ್ಕೆ ಅವನನ್ನು ತಂದಾಗ ಮುಖಕ್ಕೆ ಬಟ್ಟೆ ಹೊದಿಸಲಾಗಿತ್ತು. ಆದರೆ ಹಣೆಯ ಮೇಲೆ ಬ್ಯಾಂಡೇಜು ಹಾಕಿದುದನ್ನು ಗಮನಿಸಿದ ಪತ್ರಕರ್ತರಿಗೆ ಏನೋ ಅನುಮಾನ ಬಂತು.

ಪಶ್ಚಾತ್ತಾಪ ಮತ್ತು ಹತಾಶೆಯಿಂದ ಮೋಹನ ಠಾಣೆಯಲ್ಲಿ ಗೋಡೆಗೆ ಹಣೆ ಘಟ್ಟಿಸಿಕೊಂಡು ಗಾಯ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದರು. ಹೆಚ್ಚಿನ ವಿಚಾರಣೆಗಾಗಿ ಇನ್ನೂ ಎರಡು ದಿವಸ ಆತನನ್ನು ಪೊಲೀಸ್ ಕಸ್ಟಡಿಯನ್ನು ಇಟ್ಟುಕೊಳ್ಳಲಾಗುವುದು ಎಂದೂ ಪುತ್ತೂರು ಪೊಲಿಸರು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+