ಸಿಎಂ ಬೆಂಬಲಕ್ಕೆ ನಿಂತ ಅನಂತಮೂರ್ತಿ
ಬೆಂಗಳೂರು,
ನ. 2 : ಈ ನೆಲದ ಅದಿರು ಮಾರಿ ದುಡ್ಡು ಮಾಡುವವರು ನಿರ್ನಾಮವಾಗಲೇಬೇಕು. ಮುಖ್ಯಮಂತ್ರಿಗಳು ಅಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ಹಾಗಾಗಿ ಅವರಿಗೆ ನನ್ನ ನೈತಿಕ ಬೆಂಬಲವಿದೆ ಎಂದು ಖ್ಯಾತಿ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯುಆರ್ ಅನಂತಮೂರ್ತಿ ಹೇಳಿಕೆ ನೀಡಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಗಣಿಧಣಿಗಳ ಜೊತೆ ಕೈಜೋಡಿಸಿ ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಗಣಿಧಣಿಗಳು ಪ್ರಜಾಪ್ರಭುತ್ವವನ್ನು ಕೊಂದಿದ್ದಾರೆ. ಅನೈತಿಕ ರಾಜಕೀಯ ಮಾಡುತ್ತಿರುವ, ಮಾನಮರ್ಯಾದೆ ಇಲ್ಲದ ಇಂತವರನ್ನು ಚುನಾಯಿಸುವುದು ತಪ್ಪು ಎಂದು ಅನಂತಮೂರ್ತಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications