ಮತ್ತೊಮ್ಮೆ ಕಣ್ಣೀರಿಟ್ಟ ಯಡಿಯೂರಪ್ಪ

ಬಳ್ಳಾರಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ರೆಡ್ಡಿ, ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಅಧಿಕಾರ ಶಾಶ್ವತವಲ್ಲ. ಸುಳ್ಳು ಹೇಳುತ್ತಾ ಅಧಿಕಾರ ನಡೆಸಲು ಹೋದರೆ ಅದು ಬಹಳ ದಿನ ಉಳಿಯುವುದಿಲ್ಲ. ದೇಶದ ಇತಿಹಾಸ ತೆಗೆದುನೋಡಿದರೆ ಗೊತ್ತಾಗಲಿದೆ. ರಾಜ ಮಹಾರಾಜ್ ಎನಿಸಿಕೊಂಡಿರುವವರು ಮಣ್ಣು ಮುಕ್ಕಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಇದನ್ನು ಅರಿತು ಎಲ್ಲರೂ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ವಿರುದ್ಧ ತೀವ್ರ ದಾಳಿ ನಡೆಸಿದರು.
ಇನ್ನೊಂದಡೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯೋತ್ಸವ ಅಂಗವಾಗಿ ದ್ವಜಾರೋಹಣದ ನಂತರ ಮಾತನಾಡಿದ ಅವರು, ಚಿಲ್ಲರೆ ರಾಜಕೀಯಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದರು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಅವರ ಧೃತಿಗೆಡಿಸಿವೆ ಎಂಬುದು ಸಾಕ್ಷಿಯಾದದ್ದೆಂದರೆ ಯಡಿಯೂರಪ್ಪ ಮಾತನಾಡುತ್ತ ಗಳಗಳನೆ ಅಳತೊಡಗಿದರು. ಒಳ್ಳೆ ಕೆಲಸ ಮಾಡುವವರಿಗೆ ಅಪರಾಧ ಎಂಬ ಅವರ ಹಳೆಯ ಪ್ರಶ್ನೆಯನ್ನು ಕೇಳಿದರು. ಸಂತ್ರಸ್ಥ ನೆರೆವಿಗೆ ನಾನು ಸಿದ್ಧ ಎಂದು ಭರವಸೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications