ಬೆಂಗಳೂರಿನಲ್ಲಿ ನಗುವುದಕ್ಕೊಂದು ಕಾರಣ

ನಗುನಗುತಾ ನಡೀ ನಡಿ'ಹೆಸರಿನ ಅಡಿಯಲ್ಲಿ ಅಪರೂಪದ ಹಾಸ್ಯ ನಾಟಕೋತ್ಸವ ನಡೆಸಲಾಗುತ್ತಿದೆ. ನ.9 ರಂದು ಶಂಕರ್‌ನಾಗ್ ಅವರ ಜನ್ಮದಿನ. ಈ ಪ್ರಯುಕ್ತ ಶಂಕರ್ ಅವರ ಬದುಕು. ಕನಸು ಮತ್ತು ಸಾಧನೆ ವಿವರಿಸುವ ವೆಬ್ ಪುಟಗಳಿಗೆ ಅಂದು ಚಾಲನೆ ನೀಡಲಾಗುತ್ತದೆ. ಕನ್ನಡ ನಾಟಕಗಳಿಗೆ ಮತ್ತು ಕವಿ ಗೋಷ್ಠಿಗೆ ಟಿಕೆಟ್ ತಲಾ 100ರೂ. ಇತರೆ ಭಾಷೆಗಳ ನಾಟಕಗಳಿಗೆ 150 ರೂ.ಮಧ್ಯಾಹ್ನದ ಪ್ರದರ್ಶನಕ್ಕೆ ಬರುವ ವಿದ್ಯಾರ್ಥಿಗಳಿಗೆ ಕೇವಲ 50 ರೂ.
ಉತ್ಸವದ ಉಸ್ತುವಾರಿಯನ್ನು ನಿರ್ದೇಶಕ ಎಸ್.ಸುರೇಂದ್ರನಾಥ್ (ಸೂರಿ) ವಹಿಸಿಕೊಂಡಿದ್ದಾರೆ. ನಾಟಕಗಳ ಪ್ರದರ್ಶನ ಮಧ್ಯಾಹ್ನ 2.30 ಮತ್ತು ಸಂಜೆ 7.70 . ಕವಿಗೋಷ್ಠಿ ಸಮಯ: 7.30. ಟಿಕೆಟ್ ಗಳು ಇದೇ ಶುಕ್ರವಾರ 30 ರಿಂದ ಲಭ್ಯ. ಆನ್‌ಲೈನ್ (www.indianstage.in)ನಲ್ಲಿ ಸಹ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ದೂರವಾಣಿಯಲ್ಲಿ ಬುಕ್ ಮಾಡ
ಬೇಕಿದ್ದರೆ, 98800 36611 ಸಂಪರ್ಕಿಸಬಹುದು.
ನಾಟಕಗಳು :
ನ.5-ಒಳಕ್ ನ ಪಳಕ್ (ಮರಾಠಿ). ನಿರ್ದೇಶನ: ಮಂಗೇಶ್ ಕದಂ
ನ.6-ಮದಿಮೆ (ತುಳು). ನಿರ್ದೇಶನ: ವಿಜಯ ಕುಮಾರ್ ಕೊಡಿಯಾಲಬೈಲ್
ನ.7-ಚೆಕೋವ್ ಕಿ ದುನಿಯಾ (ಹಿಂದಿ). ನಿರ್ದೇಶನ: ರಂಜಿತ್ ಕಪೂರ್
ನ.8-ವಕ್ರ (ಕನ್ನಡ) ನಿರ್ದೇಶನ (ಮಂಡ್ಯ ರಮೇಶ್)
ನ.9-ಶಂಕರ್ ಕುರಿತ ವೆಬ್‌ಸೈಟ್ ಉದ್ಘಾಟನೆ
ನ.10-ಹಿಂದಿ ಹಾಸ್ಯ ಕವಿ ಸಮ್ಮೇಳನ
ನ.11-ಕನ್ನಡ ಹಾಸ್ಯ ಕವಿ ಸಮ್ಮೇಳನ (ಸುಮತೀಂದ್ರ ನಾಡಿಗ, ಬಿ.ಆರ್.ಲಕ್ಷ್ಮಣ್‌ರಾವ್, ಡುಂಡಿರಾಜ್, ಭುವನೇಶ್ವರಿ ಹೆಗಡೆ. ಅ.ರಾ.ಮಿತ್ರ ಪಾಲ್ಗೊಳ್ಳುವರು)
ನ.12-ಆಲ್ ಥೀವ್ಸ್ (ಆಂಗ್ಲ)
ನ.13-ಪ್ರೊಜೆಕ್ಟ್ ಸ್ಟ್ರಿಪ್ (ಆಂಗ್ಲ)
ನ.14-ಆತಂಕವಾದಿಯ ಆಕಸ್ಮಿಕ ಸಾವು (ಕನ್ನಡ). ನಿರ್ದೇಶನ ಪ್ರಕಾಶ್ ಬೆಳವಾಡಿ
ನ.15-ಆವೋ ಸಾಥಿ ಸಪ್ನೆ ದೇಖೇ (ಹಿಂದಿ)
(ಏಜೆನ್ಸೀಸ್)












Click it and Unblock the Notifications