ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ?

ಗದಗ ಜಿಲ್ಲೆಯ ಮಾಳವಾಡ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ನವಗ್ರಾಮ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಮಂತ್ರಿಯಾಗಿ ಇದು ನನ್ನ ಕೊನೆಯ ಭಾಷಣ. ರಾಜಕೀಯ ನನಗೆ ಸಾಕಾಗಿ ಹೋಗಿದೆ. ಮುಖ್ಯಮಂತ್ರಿಗಳ ವರ್ತನೆ ಅತ್ಯಂತ ಕೆಟ್ಟದಾಗಿದೆ. ಒಳ್ಳೆ ಕೆಲಸ ಮಾಡಲು ಮುಂದಾಗಿರುವ ನಮಗೆ ಸಹಕಾರ ಸಿಗುತ್ತಿಲ್ಲ. ಅಧಿಕಾರ ಬೇಕಾಗಿಲ್ಲ. ದೇವರು ನನಗೆ ಶ್ರೀಮಂತಿಕೆ ಕರುಣಿಸಿದ್ದಾನೆ. ಜನರ ಸೇವೆಗೆ ಅಧಿಕಾರ ಬೇಕಿಲ್ಲ ಎಂದು ನೊಂದು ನುಡಿದರು.
ನಾನೊಬ್ಬ ಮಂತ್ರಿಯಾಗಿ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿರುವೆ. ಇರುವಷ್ಟು ದಿನ ಜನರಿಗಾಗಿ ಕೆಲಸ ಮಾಡಿದ ತೃಪ್ತಿಯಿದೆ. ಮಂತ್ರಿಯಾಗಿ ಇಂದಿನ ನನ್ನ ಭಾಷಣ ಕೊನೆಯದು. ರಾಜಕೀಯ ಸಾಕಾಗಿದೆ. ರಾಜಕೀಯದಲ್ಲಿ ಮುಂದುವರಿಯಬಾರದು ಎಂದು ತೀರ್ಮಾನಿಸಿರುವೆ ಎಂದು ಹೇಳುವ ಮೂಲಕ ರಾಜೀನಾಮೆ ಸುಳಿವು ನೀಡಿದರು.
ಒಳ್ಳೆ ಕೆಲಸ ಮಾಡುತ್ತಿರುವ ನಮಗೆ ಅಡ್ಡಿಗಾಲು ಹಾಕುತ್ತಿರುವ ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರ ಕರುಣಾಕರರೆಡ್ಡಿ, ಮಹಾಭಾರತ ಎಲ್ಲರಿಗೂ ತಿಳಿದಿದೆ. ಕೆಟ್ಟ ಕೆಲಸ ಮಾಡುತ್ತಿದ್ದ ಕಂಸನ ಸಂಹಾರ ಹೇಗಾಯಿತು ಎಂದು. ಕೆಟ್ಟ ಕೆಲಸ ಮಾಡುವವರಿಗೆ ಉಳಿಗಾಲವಿಲ್ಲ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications